ಗುರುವಾರ, ಡಿಸೆಂಬರ್ 30, 2010

ದೂರ ದೂರ ನೋಡಿದ್ದಷ್ಟು ದೂರ...

 {ಓದುವ ಮುನ್ನ...!
ಇತ್ತೀಚಿಗೆ ಸ್ನೇಹಿತರೊಬ್ಬರ blog ನಲ್ಲಿ ಇದ್ದ ಪ್ರೇಮಪತ್ರ ಬಹಳವಾಗಿಯೇ ಕಾಡಿತು. ತನ್ನ ಪ್ರೀತಿಯ ಹುಡುಗಿ ತನ್ನೊಂದಿಗಿನ ಬಂಧನವನ್ನು ಕಳಚಿಕ್ಕೊಂಡು, ಅನಿವಾರ್ಯತೆಗಳ ಒಪ್ಪಿ ದೂರ ಸರಿಯುವಾಗ ಸಹಜವಾಗಿಯೇ ಒಬ್ಬ ಪ್ರೇಮಿಗೆ  ಇರಬಹುದಾದ ಆತಂಕಗಳು,ಮುಮ್ಮುಲತೆ ನವಿರಾಗಿ ನಿರೂಪಿಸಲ್ಪಟ್ಟಿತ್ತು ಅಲ್ಲಿ..ಅ ತೆರನಾದ ಸನ್ನಿವೇಶದಲ್ಲಿ ಒಬ್ಬ ಹುಡುಗಿಯ ತಳಮಳ, ಸಂದಿಗ್ದತೆ, ಅವಳ ಭಾವನೆಗಳು ಹೇಗಿರಬಹುದೆಂದು ನನ್ನದೇ ಆದ ಕಲ್ಪನೆಯಲ್ಲಿ, ಆ ಪ್ರೇಮಪತ್ರಕ್ಕೆ ಉತ್ತರಿಸುವ ಒಂದು ದ್ರಷ್ಟಿಕೋನದ ಪ್ರಾಮಾಣಿಕ ಪ್ರಯತ್ನವೇ. "ದೂರ ದೂರ ನೋಡಿದ್ದಷ್ಟು ದೂರ..." ಎಂದಿನಂತೆ ಓದಿ, ತಪ್ಪಿದ್ದರೆ ತಿದ್ದಿ, ಬುದ್ದಿ ಹೇಳುತ್ತಿರಲ್ಲ...?}


ನನ್ನ ಪ್ರೀತಿಯ ಹುಡುಗಾ...
              ಬಹುಶಃ ಇದೆ ನನ್ನ ಕೊನೆಯ ಪತ್ರವೆಂದು ಅಂದುಕೊಂಡೆ, ಬರೆಯಹತ್ತಿದ್ದೇನೆ...ಮುಂದೊಂದು ದಿನ ಇಂತಹ ಅವಕಾಶ ಸಿಗಬಹುದೆಂಬ ನೀರಿಕ್ಷೆ ನನ್ನಲ್ಲಿಲ್ಲ...ಅದ್ಯಾವ ಪರಿಯ ತೊಳಲಾಟ ನಿನ್ನ ಸುಡುತಿರಬಹುದೆಂದು ನಾ ಊಹಿಸಬಲ್ಲೆ. ನನ್ನಲ್ಲೂ ಆ ಬೆಂಕಿ ಹತ್ತಿ ಉರಿಯಹತ್ತಿದೆಯಲ್ಲ ಆದ್ದರಿಂದ.., ಜೀವನ ಇಷ್ಟೇ ಆಗಿದ್ದರೆ ಅದ್ಯಾಕೆ ಅಷ್ಟೊಂದು ಪ್ರೀತಿಸಿಕೊಳ್ಳಬೇಕಿತ್ತೋ....?ಕನಸುಗಳ ಕಾಣಬೇಕಿತ್ತೋ...?ಈಗನಿಸುತ್ತಿದೆ...ಭ್ರಮೆಯನ್ನೇ ಜೀವನ ಅಂದುಕೊಂಡ ಮುರ್ಖರು ನಾವೆಂದು..

ಬರಿಯ 3 ದಿನವೇ ನನ್ನ ಮೆಸೇಜು,ಫೋನು ಇಲ್ಲದೆ ಕಂಗಾಲಾಗಿರುವ ನೀನು, ಬದುಕಿನುದ್ದಕ್ಕೂ ನಾ ಜೊತೆ ಬರಲಾರೆ ಎಂಬ ಸತ್ಯವನ್ನು ಅದ್ಹೇಗೆ ಅರಗಿಸಿಕೊಳ್ಳುತ್ತಿಯಾ ಹುಡುಗಾ..? ಬರೀ ತಮಾಷೆಯಾಗಿ, ರೆಗಿಸಿಕ್ಕೊಂಡು ಹೇಳ್ತಿದ್ದ ಮಾತು, "ಬೇರೆ ಹುಡ್ಗನ್ನ ನೋಡಿ ಮದುವೆ ಮಾಡ್ಕೋ" ಅಂತ. ಬರೀಯ ಮಾತಿಗೆ ರಚ್ಚೆ ಹಿಡಿದು ಅತ್ತು, ರಂಪ ಮಾಡಿ ಮಾತನ್ನ ವಾಪಾಸ್ ತೆಗಿಸ್ಕೊಂಥ ಇದ್ದ ನನಿಗೆ, ಈಗ ಅದೇ ನಿಜವಾಗಿ ನಿಂತಿರುವಾಗ, ಅಸಹಾಯಕಳಾಗಿಬಿಟ್ಟಿದ್ದಿನೆ. ನೀನು ಬೇಕೆಂದು, ನೀನು ಮಾತ್ರವೇ ಸಾಕೆಂದು ಯಾರಿಗೆ ಹೇಳಲಿ..?ಮುದ್ದು, ಬದುಕಲ್ಲಿ ನಾವಂದುಕೊಂಡದ್ದು  ಯಾವುದೂ ಆಗುತ್ತಿಲ್ಲ ಕಣೋ.. ಮನೆಯವರ ಒಮ್ಮತದ ಒಂದು ನಿರ್ಧಾರಕ್ಕೆ ನಮ್ಮ ನೂರು ಕನಸುಗಳು ನುಚ್ಚು ನೂರಗುತ್ತಿವೆ..ಆ ಕನಸಿನ ಚೂರುಗಳ ನೋಡಿಕ್ಕೊಂಡು, ಕಣ್ಣೀರ ಧಾರೆಯೆರೆಯುತ್ತಿದ್ದೇನೆ..ಎಲ್ಲಾ ಆ ನೀರಿನೊಂದಿಗೆ ಕೊಚ್ಚಿಕ್ಕೊಂಡು ಹೋಗುತ್ತಿದೆ..

ಅಂವ ಮೊನ್ನೆ ಕಾಲ್ ಮಾಡಿದ್ದ.ಅಮ್ಮಾ ಕೂಗಿ ಹೇಳಿದ್ದರು.ನನ್ನ ಜೊತೆ ಮಾತಾಡಲಿದ್ದಿರಬೇಕು. ಅವನೇನಾದರೂ ನನ್ನಿಂದ ಮೋಸ ಹೋಗುತ್ತಿರುವನೆ?ಇದ್ದಿರಲೇಬೇಕು.. ಮನದಲ್ಲಿ ನಿನ್ನೆ ತುಂಬಿಕೊಂಡಿರುವ ನನಿಗೆ, ಅವನಲ್ಲಿ ಮಾತಾಡಲು ಮಾತಿಲ್ಲವೋ..ರೂಮಿಗೆ ಹೋಗಿ ಬಾಗಿಲಾಕಿಕ್ಕೊಂಡು ಬಿಟ್ಟೆ.. ಜೀವವೇ, ನನ್ನ ಕರ್ಕೊಂಡು ಹೋಗಿ ಬಿಡೋ ಪ್ಲೀಸ್ ...ಈ ಹಿಂಸೆಯನ್ನ ತಾಳಲಾಗುತ್ತಿಲ್ಲ ನನ್ನಿಂದ. ನಿನ್ನ ನೆನೆದೆ ಅರ್ದವಾಗುತ್ತಿದ್ದೇನೆ ನಾನು. ನೋವ ಹಂಚಿಕ್ಕೊಳ್ಳುವ ಮಾತಾನ್ನಡಿ, ನಾನೇ ನಿನ್ನ ನೋವಗಿರುವುದ ಕಂಡು ಕಣ್ಣಿರಾಗುತ್ತಿದ್ದೇನೆ ಕಣೋ..ಬಿಟ್ಟಿರಲಾಗದೆ ಇರುವ ನಮ್ಮಿಬ್ಬರ ಅಸಹಾಯಕತೆಗೆ ಕೊರಗುತ್ತಿದ್ದೇನೆ.

ಮೊನ್ನೆ ದಿನ ಬೇಟಿಯಾಗಿ ಈ ಮದುವೆ ನಿಶ್ಚಯವಾದ ವಿಷಯ ಹೇಳಿದಾಗ.. ಒಮ್ಮೆಲೇ ತುಂಬಿಕೊಂಡ ನಿನ್ನ ಕಂಗಳು ನನಗೆ ಅರ್ಥವಾಗದೇ..?ನೆನ್ನೆದೆ ಮೇಲೊರಗಿ ಬಿಕ್ಕಿ ಅಳಬೇಕೆಂದುಕೊಂಡರೂ  ಆಗಲಿಲ್ಲ. ನಿನ್ನ ಕಂಗಳಿಗೆ ಕಣ್ಣು ಸೇರಿಸಿ ಕನಸುಗಳನ್ನು ಎನಿಸಿಕೊಂಡಿದ್ದ ನನಿಗೆ,ನಿನ್ನ ಕಂಗಳು ತುಂಬಿ ನಮ್ಮ ಕನಸುಗಳು ಸೊರಹತ್ತಿದಾಗ ಅದನ್ನು ಸಂತೈಸುವ ಚೈತನ್ಯವೂ ಉಳಿದಿರಲಿಲ್ಲ. ನನ್ನ ಮದುವೆಯೂ ನಡೆಯಲಿದೆ ಮುಂದೆ..ಯಾರೋ ಗೊತ್ತಿಲ್ಲದ ಹುಡುಗನಿಗೆ ಕೊರಳೊಡ್ಡಬೇಕಿದೆ ನಾನು.ಇಂಥ ಅದೆಷ್ಟೋ ಅರ್ಥಹೀನ, ಮನಸ್ಸುಗಳ ಮಿಲನವಿಲ್ಲದ ಮದುವೆಗಳು ನಡೆದು ಹೋಗಿದೆ. ಅವುಗಳಲ್ಲಿ ಮುಂದೆ ಒಂದು ಸೇರ್ಪಡೆಯಷ್ಟೇ ನನ್ನದು.

ಬಿಸಿ ತುಪ್ಪ ಬಾಯಲಿಟ್ಟುಕ್ಕೊಂಡು ಒದ್ದಾಡುತ್ತಿದ್ದೇನೆ ಜೀವವೇ. ಕಣ್ಣಿರೊಂದು ಬಿಟ್ಟು ಬೇರೇನೂ ಗೊತ್ತಿಲ್ಲ. ನಿನ್ನ ನೆನಪುಗಳೊಂದಿಗೆ ನನಗೆ ನಾನೇ ಗೋರಿ ಕಟ್ಟಿಕ್ಕೋಳ್ಳುತ್ತಿದ್ದೇನೆ. ನನ್ನತನವನ್ನು ಮಾರಿಕ್ಕೊಂಡು, ಆಕಾಂಕ್ಷೆಗಳನ್ನು ಬಲಿ ನೀಡಿ, ನಾನು ಬಲಿಯಗುತ್ತಿದ್ದೇನೆ.ವಾರಕ್ಕೊಂದು ಬಾರಿಯಾದರೂ ಇಷ್ಟ ಪಟ್ಟು ಪಾರ್ಕಿನ ಸಂದಿಯಲ್ಲಿ ಜೊತೆಯಾಗಿ ಕೂತು ಕೇಳಿಸ್ಕೊಂತ ಇದ್ದ ಹಾಡು  "ದೂರ ದೂರ ನೋಡಿದ್ದಷ್ಟು ದೂರ ಬೊಗಸೆ ಪ್ರೀತಿ ಒಂದೇ ಬೊಗಸೆ ಕಣ್ಣಲ್ಲಿ..." ಇದೆ ಅಂದು ವಿರಹ ವಾಗಿ, ಇಂದು  ವಿದಾಯ ಗೀತೆಯೂ ಆಗಿ ನಿಂತಿರುವುದು ಎಂಥ ವಿಪರ್ಯಾಸ ನೋಡು.. ಸುಟ್ಟುಕೊಂಡು, ಸತ್ತು ಹೋಗುತ್ತಿರುವ ನನ್ನಲ್ಲೂ ಒಂದು ಆಸೆಯಿದೆಯೋ ಹುಡುಗಾ.. ಎಲ್ಲಿದ್ದರೂ ನೀ ಚೆನ್ನಾಗಿರಬೇಕು ಅಷ್ಟೇ..ಅಷ್ಟನ್ನು ಮಾತ್ರವೇ ಈ ಜೀವ ಬಯಸೋದು ಬೇಡೋದು..ನಿನ್ನ ನಾಳೆಯ ಬದುಕನ್ನು ಜೋಪಾನವಾಗಿಟ್ಟುಕೋ ..ಇಷ್ಟು ಮಾತ್ರವೇ ನಾ ಹೇಳಲಿದ್ದುದು..
                                                                ಇಂತಿ ನಿನ್ನ ಪ್ರೀತಿಯ.
                                                                       ನಿನ್ನ ಹುಡುಗಿ.                                                                        

3 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ದೂರ... ದೂರ... ನೋಡಿದಷ್ಟು ದೂರ... ಇಲ್ಲಿ ಪ್ರೇಮಿ ದೂರವಾಗುವ ಸನ್ನಿವೇಶದಲ್ಲಿ ಪ್ರಿಯತಮೆಯ ಕಲ್ಪನೆಗಳು ನಿಜಕ್ಕೂ ಅದ್ಭುತ. ಮುಂದೆಯೂ ಹೀಗೇ ಬರೆಯುತ್ತಿರಿ.

    ಪ್ರತ್ಯುತ್ತರಅಳಿಸಿ
  3. ಬಹುಶಃ ಇಲ್ಲಿ ವ್ಯಕ್ತವಾದ ಆ ನೋವು, ಪ್ರೇಮಿಯ ಮರೆತು(?) ಅನಿವಾರ್ಯತೆಗಳಿಗೆ ತಲೆಬಾಗುವ ಪ್ರತಿಯೊಬ್ಬ ಹೆಣ್ಣಿನದ್ದೂ ಆಗಿರಬಹುದು ಎಂಬುದು ನನ್ನ ಊಹೆ ಶಶೀ..ಆದರೆ ಆ ನೋವನ್ನೇ ಜೀವನವಾಗಿಸಿಕ್ಕೊಳ್ಳುವುದರಲ್ಲಿ ಅರ್ಥವಿಲ್ಲ. ಬದುಕು ನಿಂತ ನೀರಲ್ಲ..ಹರಿಯುವ ನದಿ..ದುಃಖ, ನೋವುಗಳು..ಆ ನದಿಯಲ್ಲಿ ಕೊಚ್ಚಿಕ್ಕೊಂಡು ಹೋಗುತ್ತಿರಬೇಕು..ಒಬ್ಬ ಹುಡುಗಿಯಾಗಿ ಇಂಥ ಸನ್ನಿವೇಶ ಎದುರಿಸುವಾಗ ಆಕೆ ಮನದುಂಬಿ ತನ್ನ ಹುಡುಗನಿಗೆ ಶುಭ ಹಾರೈಸುವುದನ್ನು ಬಿಟ್ಟು ಇನ್ನೇನು ಮಾಡಲು ಅಸಮರ್ಥಳು ಎಂದುಕೊಂಡು ಈ ಪತ್ರವನ್ನುಮುಗಿಸಿದ್ದೇನೆ...

    ಪ್ರತ್ಯುತ್ತರಅಳಿಸಿ