ಶುಕ್ರವಾರ, ಡಿಸೆಂಬರ್ 31, 2010

ಕತ್ತಲೊಳಗೆ.. 


 
ಕತ್ತಲ ನಡುವೆ ಮಂಡಿಯೂರಿ
ಕತ್ತೆತ್ತಿ ಚುಕ್ಕಿಗಳೆನಿಸ ಹತ್ತಿದರೆ
ಚುಕ್ಕಿಗಳೂ ಮಾಯ..!
ಮಳೆಯ ರಾತ್ರಿ ಇರಬೇಕು
ಅಂದುಕ್ಕೊಂಡಲ್ಲಿ ಮಿಂಚಿ
ಮರೆಯಾಯಿತು ಆ ಬೆಳಕು
ಅರೆರೆ..ಚಂದ್ರನ ಶೀತಲ ಬೆಳಕಲ್ಲವೇ
ಇದು..ಎಂದುಕೊಂಡೇ..
ಇರುಳ ದಾರಿಯಲ್ಲಿ ಬೆಳಕನರುಸುತ ಹೊರಟೆ
ಸರಿದಷ್ಟು ದೂರ ಸವೆದಿದ್ದು ದಾರಿ ಮಾತ್ರ
ಚಂದಿರ ಗೋಚರಿಸಲೇ ಇಲ್ಲಾ
ಹಿಂದಡಿಯಿಟ್ಟೆ ತಿರುಗಿಬಿಡಲೇ ಎಂದು
ಅಲ್ಲಿರುವುದೂ ಈ ಇರುಳೇ
ಬಂದ ಜಾಗವೇ ಸರಿಯೆಂದು
ಮತ್ತೆ ಮಂಡಿಯೂರಿದೆ
ಕತ್ತಲೊಳಗೆ ಕತ್ತಲಾಗಿ
ಚುಕ್ಕಿಗಳನ್ನು ದಿಟ್ಟಿಸಿದೆ
ಬೆಳಕ ಕನವರಿಕೆಯೊಂದಿಗೆ...!!

4 ಕಾಮೆಂಟ್‌ಗಳು:

  1. ನಿಮಗೂ ಕೂಡ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಅಕ್ಕಾ..ಪುಟ್ಟಿಗೂ ನನ್ನ ಶುಭಾಶಯ ತಿಳಿಸಿ ಬಿಡಿ..take care...

    ಪ್ರತ್ಯುತ್ತರಅಳಿಸಿ
  2. ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಅನ್ನುವ ಹಾಗೆ ಕಲ್ಪನೆಯ ಕನವರಿಕೆಯಲಿ ಕನಸ ಕಾಣಲು ಹೊತ್ತು, ಗೊತ್ತು ಬೇಕೆಂದಿಲ್ಲ. ಅದೆಲ್ಲಿಂದಲೋ ಥಟ್ಟನೆ ಆವರಿಸೋ ಕನಸ ಕನವರಿಕೆ ಬೇರೆಯೇ ಲೋಕಕ್ಕೆ ಒಯ್ಯುವುದಂತೂ ಸತ್ಯ... ನಿಜಕ್ಕೂ ನಿಮ್ಮ ಕತ್ತಲೆಯೊಳಗೆ... ಸ್ವಗತ ತುಂಬಾ ಚೆನ್ನಾಗಿದೆ. ಕಂಪ್ಯೂಟರ್ ಮುಂದೆ ಕೆಲಸ ಮಾಡುವ ವೇಳೆಯಲ್ಲೂ ಇಂತಹ ಕಲ್ಪನೆಗಳು ನಿಮ್ಮ ಮನಸ್ಸಿನಲ್ಲಿ ಬರುತ್ತಿರಲಿ... ಆಗಾಗ ನಿಮ್ಮ ಬ್ಲಾಗ್ ಅನ್ನು ಕುತೂಹಲದಿಂದ ಇಣುಕಿದರೆ ಇಂತಹ ಸಾಲುಗಳು ಮತ್ತೆ... ಮತ್ತೆ... ಕಾಡುತಿರಲಿ.

    ಪ್ರತ್ಯುತ್ತರಅಳಿಸಿ
  3. ಕಲ್ಪನೆಯ ಲೋಕದಲ್ಲಿ ಹುಟ್ಟಿಕ್ಕೊಂಡ ಕನಸುಗಳಿಗೆ, ಅರ್ಥಹೀನ ಬೆಗುದಿಗಳಿಗೆ ಅಕ್ಷರ ಜೋಡಿಸುವ ಒಂದು ಸಣ್ಣ ಪ್ರಯತ್ನವಷ್ಟೇ ನನ್ನದು..ಬಹುಶಃ ಸಣ್ಣ ನಿಟ್ಟಿಸಿರೊಂದು ಈ ರೀತಿಲಿ ಹೊರಬಂದಿರಬಹುದಷ್ಟೇ.. ಈ ಪಯಣದಲ್ಲಿ ನಿಮ್ಮ ಹರಕೆ ಹಾರೈಕೆಗಳೊಂದಿಗೆ ಮುನ್ನಡೆಯುವ ಇಚ್ಛೆ ನನ್ನದು.. ಇದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎನ್ನುವುದು ನನ್ನ ಎಣಿಕೆ..ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ