ಸೋಮವಾರ, ಜನವರಿ 3, 2011

ನೀನೇಯೇನು..?

ಎದೆಬಾಗಿಲ ಬಡಿದು
ಯಾರೆಂದು ಕೇಳುವ ಮೊದಲೇ
ಪ್ರೇಮಸೌಧದ ಒಡೆಯನಾದವ
ನೀನೇಯೇನು..?

ಮುಂಜಾನೆಯ ಚುಮುಚುಮು ಹವೆಗೆ
ನಾ ಚಳಿ ಎನ್ನುವ ಮೊದಲೇ
ಬರಸೆಳೆದು ಅಪ್ಪಿದವ
ನೀನೇಯೇನು..?

ಕಡು ಉರಿಬಿಸಿಲ ಬೇಗೆಗೆ
ನಾ ದಣಿವೆನ್ನುವ ಮೊದಲೇ
ಮಂಜು ಹರಿದು ತಂಪಿರಿಸಿದವ
ನೀನೇಯೇನು..?

ಹಗಲಿರುಳುಗಳಲ್ಲಿ  ಕನಸ ತುಂಬಿ
ಮುದ್ದಾಡಿದ,ನಿನ್ಯಾರೆಂದು ತಿಳಿಯುವ ಮೊದಲೇ
ಮಾಯೆಯ ಮುಸುಕೆಳೆದು ಮಾಯವಾದವ
ನೀನೇಯೇನು..?
==================================

ನೀನೆಯೇನು ಕವನಕ್ಕೆ ಫೋಟೋಶಾಪ್ ವರ್ಕ್ ಮಾಡಿದ ಲಲಿತ ಪೂಜಾರಿ.