ಶನಿವಾರ, ಏಪ್ರಿಲ್ 2, 2011

ಕಳೆದುಹೋದುದು...

ಕಳೆದುಹೋದುದಕ್ಕಾಗಿ
ಹುಡುಕಿದೆ, ತಡಕಾಡಿದೆ, ಅಲೆದಾಡಿದೆ
ಬಿಕ್ಕುವ ಎದೆಗೆ ಒಲವ ದಕ್ಕಿಸಿಕೊಡುವ
ನೆಪದಲ್ಲಿ ನಿರಂತರಳಾದೆ
ಅಷ್ಟಿಷ್ಟು ಕೂಡಿಸಿಟ್ಟ ನೆನಪುಗಳಲ್ಲಿ
ಆ ಕಳೆದುಹೊದುದು ಇರಲಿಲ್ಲ
ಕರಾಳತೆಗಳನ್ನು ಬಂಧಿಸುವ ನೆಪದಲ್ಲಿ
ಹ್ರದಯದಾಳ ಮೀಟಿ, ದಾಟಿ ಹೋಗುವ
ನೀಡಿದಾದ ನಿಟ್ಟುಸಿರಲ್ಲೂ ಸಿಗಲಿಲ್ಲ
ನಗುವ ಧರಿಸಿದ , ದಿರಿಸಿನ ಮುಖದಲ್ಲೂ
ಅದರ ಛಾಯೆಯಿರಲಿಲ್ಲ..
ಹಾಗಾದರೆ ಕಳೆದುಹೊದುದೆನು?!!
ಕೊನೆಗೂ ಅರ್ಥವಾಗಲೇ ಇಲ್ಲಾ
..!!