ಶನಿವಾರ, ಏಪ್ರಿಲ್ 2, 2011

ಕಳೆದುಹೋದುದು...

ಕಳೆದುಹೋದುದಕ್ಕಾಗಿ
ಹುಡುಕಿದೆ, ತಡಕಾಡಿದೆ, ಅಲೆದಾಡಿದೆ
ಬಿಕ್ಕುವ ಎದೆಗೆ ಒಲವ ದಕ್ಕಿಸಿಕೊಡುವ
ನೆಪದಲ್ಲಿ ನಿರಂತರಳಾದೆ
ಅಷ್ಟಿಷ್ಟು ಕೂಡಿಸಿಟ್ಟ ನೆನಪುಗಳಲ್ಲಿ
ಆ ಕಳೆದುಹೊದುದು ಇರಲಿಲ್ಲ
ಕರಾಳತೆಗಳನ್ನು ಬಂಧಿಸುವ ನೆಪದಲ್ಲಿ
ಹ್ರದಯದಾಳ ಮೀಟಿ, ದಾಟಿ ಹೋಗುವ
ನೀಡಿದಾದ ನಿಟ್ಟುಸಿರಲ್ಲೂ ಸಿಗಲಿಲ್ಲ
ನಗುವ ಧರಿಸಿದ , ದಿರಿಸಿನ ಮುಖದಲ್ಲೂ
ಅದರ ಛಾಯೆಯಿರಲಿಲ್ಲ..
ಹಾಗಾದರೆ ಕಳೆದುಹೊದುದೆನು?!!
ಕೊನೆಗೂ ಅರ್ಥವಾಗಲೇ ಇಲ್ಲಾ
..!!

8 ಕಾಮೆಂಟ್‌ಗಳು:

 1. chitra, kavana eradoo sundaravagi bandide. kaleadaddu matte dorakali. shubhashayagalu.

  ananth

  ಪ್ರತ್ಯುತ್ತರಅಳಿಸಿ
 2. ಸುಶ್ಮಾ... ಎಂದಿನಂತೆ ಕವನದ ಸಾಲುಗಳು... ಶೀಷರ್ಿಕೆ, ಫೊಟೋ ತುಂಬಾ ಚೆನ್ನಾಗಿದೆ.
  ನಿಜಕ್ಕೂ ಕಳೆದುಹೋದುದು ಏನೂ ಇಲ್ಲ... ಕಳೆದುಹೋಗಿರುವ ಬಗ್ಗೆ ಚಿಂತಿಸದೆ ಇದ್ದುದನ್ನು ಕಳೆದುಕೊಳ್ಳದೆ, ಜೋಪಾನವಾಗಿ ಕಾಯ್ದುಕೊಳ್ಳುವುದೇ ಜಾಣತನ...! ಮುಂದೆಯೂ ನಿಮ್ಮ ಲೇಖನಿಯಿಂದ ಇಂಥ ಉತ್ತಮ ಕವನಗಳು ಮತ್ತಷ್ಟು ಹೊರಬರಲಿ...

  ಪ್ರತ್ಯುತ್ತರಅಳಿಸಿ
 3. nimma ee manobhavada kavithe chennagide..... nimma kaledaddu matte sigali embude nanna aashaya.....

  ಪ್ರತ್ಯುತ್ತರಅಳಿಸಿ
 4. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಪ್ರವರ & ದಿನಕರ್ ಸರ್...

  ಪ್ರತ್ಯುತ್ತರಅಳಿಸಿ