ಗುರುವಾರ, ಜೂನ್ 9, 2011

ಹೊಸ ಜೀವನಕ್ಕೆ ಕಾಲಿಟ್ಟ ಮುದ್ದಿನ ಗೆಳತಿಗೆ..

===============================================
 ಸ್ನೇಹಿತರೆ.. ಈ ಪೋಸ್ಟ್ ನನ್ನ ಹಸಮಣೆಯೇರಿದ ಜೀವದ ಗೆಳತಿಗೆ ಅರ್ಪಣೆ....ಅವಳ ಮುಂದಿನ ದಾಂಪತ್ಯ ಜೀವನಕ್ಕೆ ನನ್ನೊಂದಿಗೆ ನೀವೆಲ್ಲರೂ ಕೂಡ ಶುಭ ಹಾರೈಸ್ತಿರಲ್ಲ....?
===============================================
ಅದೆಷ್ಟು ದಿನಗಳು, ತಿಂಗಳುಗಳು, ವರ್ಷಗಳು ಪುಟ ತಿರುವಿದಂತೆ ಪಟಪಟನೆ ಸರಿದು ಹೋದುವು? ಒಟ್ಟಿಗೆ ಓಡಾಡಿದ್ದು, ಕುಣಿದಿದ್ದು, ಶಾಪಿಂಗ್, ಹೋಟೆಲ್, ಪಾರ್ಲರ್....ಮುಗಿದೇ ಹೋಗದೆನ್ನುವಷ್ಟು ನಕ್ಕಿದ್ದು, ಮಾತಾಡಿದ್ದು, ಸೋಲನ್ನೆಲ್ಲ ಹೊರಹಾಕಿ ನಿನ್ನ ಮಡಿಲಲ್ಲಿ ಅತ್ತಿದ್ದು, ನೀ ನನ್ನ ಮಡಿಲಲ್ಲಿ ಹಗುರಾಗಿದ್ದು ....ಒಂದಾ..?ಎರಡಾ..?ಮುಗಿಯದ ನೆನಪಿನ ಖಜಾನೆ ಬಳಿಯಿದೆ ....ಸ್ನೇಹದ ಅನುಭೂತಿನ ಪೂರ್ತಿಯಾಗಿ ಸವಿದೇ ಬಿಟ್ಟೆವಾ ನಾವು..?ಎಂದುಕೊಳ್ಳುವಾಗಲೇ ನೀ ಮದುಮಗಳಾಗಿ ಬಿಟ್ಟೆ.....

 ಈ ಸಂದರ್ಭದಲ್ಲೇ ನೆನಪಿನ ಬುತ್ತಿಯೆಲ್ಲ ಬಿಚ್ಚಿಕ್ಕೊಳ್ಳುತ್ತಿರುವುದು...ಅಕ್ಕನಂಗೆ ಕೈ ಹಿಡಿದೇ ಸ್ಕೂಲ್  ಹತ್ತಿಸಿದೆ...ಪುಟ್ಟ ಹುಡುಗಿಗೆ ಗದರಿದೆ ತಂಟೆ ಹುಡುಗರ ಬಾಯಿ ಮುಚ್ಚಿಸಿದೆ...ನೀ ನಂಗೆ ದಾರಿ ಮದ್ಯೆ ನಿಲ್ಸಿ ಬೈದಿದ್ದು ಇನ್ನೂ ಹಸಿ ಹಸಿ ನೆನಪು..ಈ ಬಗ್ಗೆ ಇನ್ನೂ ಸ್ವಲ್ಪ ಮುನಿಸು! ಅಪ್ಪನ ಥರ ಧೈರ್ಯ ತುಂಬೋ, ಅಮ್ಮನಂಗೆ ಕಾಳಜಿ ಮಾಡೋ, ಅಣ್ಣನ ಥರ ರೇಗಿಸೋ, ಪ್ರೀತಿಯ ಹುಡುಗನ ಥರ ಪ್ರೀತಿಸೋ ನಿನ್ನ ಅದ್ಹೆಂಗೆ ನಾ ನಿನ್ನ, ನಿನ್ನ ಗಂಡಂಗೆ ಬಿಟ್ಟು ಕೊಡಲಿ ಹೇಳು..?! ಅದೆಷ್ಟು ಬಾರಿ ನಾವು ಅಂದ್ಕೊಂಡಿಲ್ಲ?ಹುಡುಗರಾಗಿ ಹುಟ್ಬೇಕಿತ್ತು ಅಂತ...ನಿಜ ಕಣೋ ಹಂಗಿದ್ರೆನೆ ಚಂದ ಇತ್ತು...ಮದ್ವೆ ಆಗಿ ನನ್ನ ಬಿಟ್ಟು ಹೋಗೋ ತಾಪತ್ರಯ ನಿಂಗೆ, ನಿನ್ನ ಬಿಟ್ಟು ಒಂಟಿಯಾಗಿರೋ ಸಂಕಷ್ಟ ನಂಗೆ ಇರ್ತ ಇರ್ಲಿಲ್ಲ...!
ನಿಂಗೆ ಮದ್ವೆ ಫಿಕ್ಸ್ ಅದಮೇಲೆ ನಿನ್ನ "ಅವ್ರ" ವಿಷ್ಯ ತೆಗೆದಾಗಲೆಲ್ಲ ನೀ ನಾಚ್ಕೊತ್ತಿದ್ದ ಪರಿಗೆ ಈಗಲೂ ಬೆರಗಾಗುತ್ತೇನೆ..ನಮ್ಮೂರಿನ ಜೋರು ಬಾಯಿಯ ಜೋರಿನ ಹುಡುಗಿಗೂ ನಾಚ್ಕೆ ಬರತ್ತಾ ಅಂತಾ...!! ನಿನ್ನ ಅವರ ಬಗ್ಗೆ ಕನಸುಗಳನ್ನು ಹೆಣೆಯಲಾರಂಭಿಸಿದ ದಿನಗಳವು...ಕಣ್ಣು ಮುಚ್ಚಿ ಬಿಡೋವಷ್ಟರಲ್ಲಿ ನೀ 'ಅವರ ಅವಳು' ಆಗಿಯೂ ಬಿಟ್ಟೆ...
 ಗೆಳತಿ, ನೀನಿಲ್ಲದೆ ಖಾಲಿ ಖಾಲಿ ಆಗಿಬಿಟ್ಟಿದ್ದೇನೆ  ಅನಿಸಿಬಿಟ್ಟಿದೆ...ಮುಸ್ಸಂಜೆಗಳೆಲ್ಲ ಕಾಡುತ್ತಿದಾವೆ...ದಿನ ಸಂಜೆಯ ಹೊತ್ತು ಆಡುತ್ತಿದ್ದ ಮಾತು, ಕೀಟಲೆಗಳು ನೆನಪಾಗಿ ಅಳುವೇ ಬಂದು ಬಿಡುತ್ತಿದೆ.. "ಗಂಡ ಹೆಂಡತಿ ಥರ ಇದ್ದೀರಿ-ಒಟ್ಟೋಟ್ಗೆ.." ಅಂತ ಫ್ರೆಂಡ್ಸ್ ನನ್ನ ರೆಗಿಸೋವಾಗ ನಿನ್ ಗಂಡನ ಬಗ್ಗೆ ನನಗೊಂತರ ಕಂಡೂ ಕಾಣದಂತ ಜಲಸಿ.. ನನ್ ಗಂಡನ್ನ ಅವನ್ನ ಹೆಂಡ್ತಿ ಮಾಡ್ಕೊಂಡ್ನಲ್ಲ ಅವ್ನು ಅಂತ...!!

ಕೇಳೇ ಮುದ್ದಿನ ಗೆಳತಿ ನೀ ಕೊಟ್ಟ ಈ ಸಾಗರದಂಥ ಸ್ನೇಹಾನ ಬೊಗಸೆಯಷ್ಟಿರೋ ಈ ಹ್ರದಯ ಮಂದಿರದಲ್ಲಿ ಇನ್ನೆಂದೂ ಚೆಲ್ಲಿ ಹೋಗದಂತೆ ಬಚ್ಚಿಟ್ಟುಕ್ಕೊಂಡಿದ್ದೇನೆ ...ಅದು ಕೊನೆ ಉಸಿರ ನಂತರವೂ ಹಾಗೆ ಇರತ್ತೆ ಅಲ್ವಾ...?!

happy married life sweet heart........Missing u lot......