ಮಂಗಳವಾರ, ಆಗಸ್ಟ್ 2, 2011

ಖಾಲಿ ಖಾಲಿ...

ಕಳೆದು ಹೋದ ನೆನ್ನೆಗಳಿಗೆ
ಮುತ್ತಿಕ್ಕೊಂಡು ಕಾಡುವ ನೆನಪುಗಳಿಗೆ
ಹತ್ತಿಕ್ಕಲಾರದ ನೋವುಗಳಿಗೆ
ಕನಸು ಕಂಗಳು ಅತ್ತು ಸೋಲುತ್ತವೆ..!!

ಎದೆಯ ತುಂಬಾ ಪಸರಿರೋ ಕನವರಿಕೆಗಳು
ಸಾಲುಗಟ್ಟಿ ನಿಂತ ನಿರೀಕ್ಷೆಗಳು
ನಿಂತಲ್ಲೇ ಮರಗಟ್ಟಿ ಹೋಗುತ್ತವೆ
ನೀರವ ಮೌನ ಜೊತೆಯಾಗುತ್ತದೆ
ನಿದ್ರೆ ಬಾರದ ರಾತ್ರಿಗಳು
ಬೇಗುದಿಯ ಹಗಲುಗಳು
ಬದುಕಿಗೆ ಜಮೆಯಾಗುತ್ತದೆ

ಉರಿ, ದಾಹ, ಸೋಲು...
ಕರುಳೊಳಗೆ ಕತ್ತರಿ ಆಡಿಸಿದಂತೆ..!
ಅರ್ಥಕಳಕ್ಕೊಂಡ ನೂರಾರು ಕನಸುಗಳು
ಹಾಗೆ ಸುಮ್ಮನೆ ಸಾಯುತ್ತವೆ..
ಮತ್ತೇ ಜೊತೆಯಾಗಲಾರದಂತೆ
ಮತ್ತೇನಿದೆ ಒಳಗೆ?ಎದೆಯೊಳಗೆ?
ಎಲ್ಲವೂ ಖಾಲಿ ಖಾಲಿ...
ಸೋರಿ, ಜಾರಿ ಹೋಗಿದೆ...!!