ಮಂಗಳವಾರ, ಆಗಸ್ಟ್ 2, 2011

ಖಾಲಿ ಖಾಲಿ...

ಕಳೆದು ಹೋದ ನೆನ್ನೆಗಳಿಗೆ
ಮುತ್ತಿಕ್ಕೊಂಡು ಕಾಡುವ ನೆನಪುಗಳಿಗೆ
ಹತ್ತಿಕ್ಕಲಾರದ ನೋವುಗಳಿಗೆ
ಕನಸು ಕಂಗಳು ಅತ್ತು ಸೋಲುತ್ತವೆ..!!

ಎದೆಯ ತುಂಬಾ ಪಸರಿರೋ ಕನವರಿಕೆಗಳು
ಸಾಲುಗಟ್ಟಿ ನಿಂತ ನಿರೀಕ್ಷೆಗಳು
ನಿಂತಲ್ಲೇ ಮರಗಟ್ಟಿ ಹೋಗುತ್ತವೆ
ನೀರವ ಮೌನ ಜೊತೆಯಾಗುತ್ತದೆ
ನಿದ್ರೆ ಬಾರದ ರಾತ್ರಿಗಳು
ಬೇಗುದಿಯ ಹಗಲುಗಳು
ಬದುಕಿಗೆ ಜಮೆಯಾಗುತ್ತದೆ

ಉರಿ, ದಾಹ, ಸೋಲು...
ಕರುಳೊಳಗೆ ಕತ್ತರಿ ಆಡಿಸಿದಂತೆ..!
ಅರ್ಥಕಳಕ್ಕೊಂಡ ನೂರಾರು ಕನಸುಗಳು
ಹಾಗೆ ಸುಮ್ಮನೆ ಸಾಯುತ್ತವೆ..
ಮತ್ತೇ ಜೊತೆಯಾಗಲಾರದಂತೆ
ಮತ್ತೇನಿದೆ ಒಳಗೆ?ಎದೆಯೊಳಗೆ?
ಎಲ್ಲವೂ ಖಾಲಿ ಖಾಲಿ...
ಸೋರಿ, ಜಾರಿ ಹೋಗಿದೆ...!!

8 ಕಾಮೆಂಟ್‌ಗಳು:

 1. ತುಂಬಾ ಸುಂದದ ಸಾಲುಗಳು..
  ತುಂಬಾ ಇಷ್ಟವಾಯಿತು.......

  ಜನುಮ ದಿನದ ಶುಭಾಶಯಗಳು....

  ಪ್ರತ್ಯುತ್ತರಅಳಿಸಿ
 2. "ಕನಸು ಕಂಗಳು ಅತ್ತು ಸೋಲುತ್ತವೆ..!!"

  ಸೋಲುವುದು ಬೇಡ..ಗೆಲ್ಲುವ ಧೈರ್ಯ ನಿಮ್ಮದಾಗಲಿ... ಚೆನ್ನಾಗಿದೆ ಸಾಲುಗಳು !!! ಇನ್ನಷ್ಟು ಬರೆಯಿರಿ...

  ಪ್ರತ್ಯುತ್ತರಅಳಿಸಿ
 3. ಧನಾತ್ಮಕ ಚಿ೦ತನೆಗಳು ಕವನದ ರೂಪದಲ್ಲಿ ಮೂಡಿಬರಲಿ...:) ಅಭಿನ೦ದನೆಗಳು.

  ಅನ೦ತ್

  ಪ್ರತ್ಯುತ್ತರಅಳಿಸಿ
 4. ನೆನಪುಗಳೂ ಮತ್ತು ಕನಸುಗಳು ನಮ್ಮ ಮನಸ್ಸನ್ನು ಸುಸ್ಥಿತಿಯಲ್ಲಿಡುವ ಚಿಕಿತ್ಸೆಗಳು.

  ನಿಮ್ಮ ಕವನದ ಒಟ್ಟಾರೆ ಭಾವನೆ ಮತ್ತು ಭಾಷೆಯ ಸರಳ ಬಳಕೆ ನಿಮ್ಮ ಕವ್ಯದ ಶಕ್ತಿ. ಹೀಗೆ ಸರಳವಾಗೇ ಬರೆಯುತ್ತಿರಿ.


  ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
  www.badari-poems.blogspot.com
  www.badari-notes.blogspot.com
  www.badaripoems.wordpress.com

  Face book Profile : Badarinath Palavalli

  ಪ್ರತ್ಯುತ್ತರಅಳಿಸಿ
 5. ಸುಶ್ಮಾಮೊದಲ ನಾಲಕ್ಕು ಸಾಲುಗಳೇ ಸಾಕು..ನಿಮ್ಮ ಭಾವಮಂಥನದ ಪರಿ ಮತ್ತು ಅದನ್ನು ಕವನಿಸಿದ ಪರಿಯ ಮೆಚ್ಚಿಕೊಳ್ಳಲು,,,ಚನ್ನಾಗಿದೆ...

  ಪ್ರತ್ಯುತ್ತರಅಳಿಸಿ