ಶನಿವಾರ, ಸೆಪ್ಟೆಂಬರ್ 24, 2011

ಅರಳಿ ನಿಂತಿದ್ದೇನೆ ಗೆಲುವಾಗಿ..!ಕೊಚ್ಚೆಯಲ್ಲೇ ಬಿದ್ದು ಎದ್ದು
ಹೊರಳಾಡಿ ಕೊಸರಾಡಿ
ಯುದ್ದ ಮಾಡಿ, ಗೆದ್ದು-ಸೋತು ಸೋತು-ಗೆದ್ದು
ಅರಳಿ ನಿಂತಿದ್ದೇನೆ ಗೆಲುವಾಗಿ..!

ರವಿಯ ಧಗೆಗೆ ಒಡ್ಡಿಕ್ಕೊಂಡು
ಬೀಸಿದ ಗಾಳಿಯ ತಂಗಾಳಿಯಾಗಿಸಿಕ್ಕೊಂಡು
ಪ್ರವಾಹದ ವಿರುದ್ದಕ್ಕೆ ಈಜಿಕ್ಕೊಂಡು
ಅರಳಿ ನಿಂತಿದ್ದೇನೆ ಗೆಲುವಾಗಿ..!

ಕಂಡ ಕಂಡವರೆಲ್ಲ ಮಚ್ಚರಿಸುವಂತೆ
ಬಂದು ಹೋಗುವವರೆಲ್ಲ ಅಚ್ಚರಿಸುವಂತೆ
ಅಸಹ್ಯಿಸುವವರ ಕಿಚ್ಚೆರಿಸುವಂತೆ
ಅರಳಿ ನಿಂತಿದ್ದೇನೆ ಗೆಲುವಾಗಿ..!