ಶನಿವಾರ, ಸೆಪ್ಟೆಂಬರ್ 24, 2011

ಅರಳಿ ನಿಂತಿದ್ದೇನೆ ಗೆಲುವಾಗಿ..!ಕೊಚ್ಚೆಯಲ್ಲೇ ಬಿದ್ದು ಎದ್ದು
ಹೊರಳಾಡಿ ಕೊಸರಾಡಿ
ಯುದ್ದ ಮಾಡಿ, ಗೆದ್ದು-ಸೋತು ಸೋತು-ಗೆದ್ದು
ಅರಳಿ ನಿಂತಿದ್ದೇನೆ ಗೆಲುವಾಗಿ..!

ರವಿಯ ಧಗೆಗೆ ಒಡ್ಡಿಕ್ಕೊಂಡು
ಬೀಸಿದ ಗಾಳಿಯ ತಂಗಾಳಿಯಾಗಿಸಿಕ್ಕೊಂಡು
ಪ್ರವಾಹದ ವಿರುದ್ದಕ್ಕೆ ಈಜಿಕ್ಕೊಂಡು
ಅರಳಿ ನಿಂತಿದ್ದೇನೆ ಗೆಲುವಾಗಿ..!

ಕಂಡ ಕಂಡವರೆಲ್ಲ ಮಚ್ಚರಿಸುವಂತೆ
ಬಂದು ಹೋಗುವವರೆಲ್ಲ ಅಚ್ಚರಿಸುವಂತೆ
ಅಸಹ್ಯಿಸುವವರ ಕಿಚ್ಚೆರಿಸುವಂತೆ
ಅರಳಿ ನಿಂತಿದ್ದೇನೆ ಗೆಲುವಾಗಿ..!

25 ಕಾಮೆಂಟ್‌ಗಳು:

 1. ಚೈತನ್ಯ ಪೂರ್ಣ ಕವನ. ಗೆಲುವಿನ ಹೆಮ್ಮಯನ್ನು ಚೆನ್ನಾಗಿ ಬಿಂಬಿಸಿದೆ. ಕೊನೆಯ ಚರಣದಲ್ಲಿ ಕಾವ್ಯದ ಲಯ, ಪದ ಬಳಕೆ ಸಮರ್ಥವಾಗಿದೆ.

  ನನ್ನ ಬ್ಲಾಗಿಗು ಬನ್ನಿರಿ.
  ನನ್ನ ಫೇಸ್ ಬುಕ್ ಪ್ರೊಫೈಲ್ :
  Badarinath Palavalli

  ಪ್ರತ್ಯುತ್ತರಅಳಿಸಿ
 2. ಹ್ಹ ಹ್ಹ ಹ್ಹ ಅಂತೂ,, ಇಂತೂ..
  ಬಂತೊಂದು ಗೆಲುವಿನ ಕವನ.
  ಈ ಛಲವೇ ತುಂಬಿರಲಿ ಪ್ರತಿದಿನ.
  ಆಗಲಿ ನಿನ್ನ ಬಾಳೊಂದು ಹೂ ಬನ.:-)
  ಹೀಗೆ ಬಯಸುವೆ ನಾ ಅನುದಿನ. :))

  ಪ್ರತ್ಯುತ್ತರಅಳಿಸಿ
 3. ಮುಂದುವರೆಸಿದ್ದೆನೆ ತಮ್ಮ ಅಪ್ಪಣೆ ಇಲ್ಲದೆ ಕ್ಷಮಿಸಿ:

  ಮೊದಲು ಮೊಗ್ಗಾಗಿ ನನ್ನತನವನು
  ನಾ ಗಟ್ಟಿಯಾಗಿರಿಸಿ ಕೊಂಡೆ
  ಈಗ ಹೂವಾಗಿ ನನ್ನತನವನು
  ಎಲ್ಲರೆದುರು ಹೇಳಿಕೊಂಡೆ .

  ಉದುರುವೆನು ಇನ್ನೆಷ್ಟು ದಿನ
  ಹೊಸ ಹೂವುಗಳಾದರೂ ಮೆರೆಯಲಿ.
  ಉಳಿಯುವೆನು ಮತ್ತೆ ಬರೆ ಗಡ್ಡೆಯಾಗಿ.
  ಹೊಸ ಹೂವಿಗೆ ಆಧಾರವಾಗಿ,ದಾರಿದೀಪವಾಗಿ.


  (ಭಾವ ಭಂಗವಾದಲ್ಲಿ ದಯವಿಟ್ಟು ಮನ್ನಿಸಿ)
  ನಾನು ಮಾಡಿದ್ದು ಸರಿಯೇ ??? ಎಲ್ಲರೂ ದಯವಿಟ್ಟು ತಿಳಿಸಿ...

  ಪ್ರತ್ಯುತ್ತರಅಳಿಸಿ
 4. ಸವಿನೆನಪುಗಳು...ಅಂತು ಇಂತೂ ಗೆಲುವಿನೊಂದು ಕವನಕ್ಕೆ ಸ್ಪೂರ್ತಿಯಾಗಿ ಬಿಟ್ಟಿರಿ....ಬೆನ್ನು ತಟ್ಟಿದಿರಿ...ಇದಕ್ಕಿಂತ ಈ ಗೆಳತಿಗೆ ಇನ್ನೇನು ಬೇಕು...? tanq vry much....

  ಪ್ರತ್ಯುತ್ತರಅಳಿಸಿ
 5. ಚಿನ್ಮಯ್.. ಜೀವನದಲ್ಲಿ ಬಹಳಷ್ಟು ನೋವು ಉಂಡಾಗ...ಆ ನೋವಿನ ಕುರಿತು ಚಿಂತಿಸದೆ...ಅದನ್ನು ಮೆಟ್ಟಿ ನಿಲ್ಲೋ ಸಾಹಸ ಇದ್ದರಷ್ಟೇ ಗೆಲುವು ಸಾದ್ಯ...
  ಹೂವನ್ನು ಮುಂದಿಟ್ಟುಕ್ಕೊಂಡು ಇದನ್ನ ಹೇಳುವ ಪ್ರಯತ್ನ ಮಾಡಿದೆ...ನಿಮ್ಮೆಲ್ಲರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಧನ್ಯವಾದಗಳು...
  ನಾನು ಸಾಹಸಗಾದೆ ಯನ್ನು ಹೇಳುತ್ತಾ ಹೋದರೆ ನೀವು ತ್ಯಾಗದಲ್ಲಿ ಸುಖವ ಕಾಣೋ ಹೂವ ಬಗ್ಗೆ ಹೇಳಿದಿರಿ....ಚಂದದ ಕವನ....ಧನ್ಯವಾದಗಳು..

  ಪ್ರತ್ಯುತ್ತರಅಳಿಸಿ
 6. ಚಿನ್ಮಯ್ ಭಟ್..ಅರಳುವಾಗಲೇ ನಿರಾಶೆಯನ್ನು ವ್ಯಕ್ತಪಡಿಸಿದ್ದೀರಿ ನಿಮ್ಮ ಕವನದಲ್ಲಿ,,
  "ಅವರವರ ಭಾವಕ್ಕೆ.. ಅವರವರ ಭಕುತಿಗೆ" ತಕ್ಕ ಕವನ,
  ಮೊದಲ ಭಾಗದಲ್ಲಿ ಆಗ ತಾನೇ ಅರಳುವ ಹೂ ಮನಸು
  ಎರಡನೇ ಭಾಗದಲ್ಲಿ ವಯಸ್ಸಿಗೆ ಮೀರಿದ ಆಲೋಚನೆ ಹೊಂದಿದೆ.:-)
  ಮಿಕ್ಕಂತೆ ನಿಮ್ಮ ಪದಸಂಯೋಜನೆ ಚೆನ್ನಾಗಿದೆ..! :-)

  ಪ್ರತ್ಯುತ್ತರಅಳಿಸಿ
 7. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 8. ಹ್ಹ ಹ್ಹ ಹ್ಹ Thanq ಸುಷ್ಮಾ.. :)
  ಇದಕ್ಕಿಂತ ಬೇರೆ ಭಾಗ್ಯ ಉಂಟೇ..??
  ಆದರೆ ಅವರವರ ಸ್ಪೂರ್ತಿಗೆ
  ಆವರವರ ಮನಸೇ ಕಾರಣ,,
  ನಾನು ಕೇವಲ ನೆಪ ಮಾತ್ರ..! :-)

  ಪ್ರತ್ಯುತ್ತರಅಳಿಸಿ
 9. ಸುಶ್ಮಾ, ಚನ್ನಾಗಿದೆ ಪುಟ್ಟ ಪುಟ್ಟ ಸಾಲುಗಳ ಧೀಮಂತ ಮನಸ ಹೊತ್ತ ಭಾವನೆಗಳ ಸಾಕಾರಗೊಳಿಸ ಹೊರಟ ಪರಿ...ನೈಸ್ ,.

  ಪ್ರತ್ಯುತ್ತರಅಳಿಸಿ
 10. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 11. ಮಲ್ಲಿಕಾರ್ಜುನ sir ಬರೆಯುವ ಪ್ರತಿ ಪದಗಳಿಗೂ ನೀರಾಸೆಯನ್ನೇ ಉಣಬಡಿಸುತ್ತಿದ್ದ ಸಮಯದಲ್ಲಿ ಸೂಕ್ತ ಮಾಹಿತಿ ನೀಡಿ ತಿದ್ದಿದ್ದಿರಿ..ಮನಸೇ ಎಲ್ಲದ್ದಕ್ಕೂ ಕಾರಣ ನಿಜವೇ ಆದರೂ...ಈ ಮನಸಿಗೆ ದಾರಿ ಗೊತ್ತಿಲ್ಲ.. ಹಾಗಲ್ಲ ಹೀಗೆ ಬರಿ ಎಂದು ಪ್ರೋತ್ಸಹಿಸಿದ್ದಿರಿ..ಹುರಿದುಂಬಿಸಿದ್ದಿರಿ ..
  Once again so much sir..

  ಅಜಾದ್ ಸರ್..ಗುರು ಸರ್...ಪ್ರತಿಕ್ರಿಯೆಗೆ ದನ್ಯವಾದಗಳು

  ಪ್ರತ್ಯುತ್ತರಅಳಿಸಿ
 12. ಸರಳ ಶಬ್ಧಗಳಲ್ಲಿ ಹಿಡಿದಿಟ್ಟ ಭಾವ ಸೊಗಸಾಗಿದೆ...

  ಕೊನೆಯ ಚರಣ ಬಹಳ ಇಷ್ಟವಾಯಿತು... ಅದೇ ಕವನದ ತಾತ್ಪರ್ಯವಲ್ಲವೆ?

  ಪ್ರತ್ಯುತ್ತರಅಳಿಸಿ
 13. ಅದರ ಭಾಷೆ ನಿಮ್ಮ ಕವಿತೆಯಲ್ಲಿದೆ...... ಬರೀತಿರಿ.....

  ಪ್ರತ್ಯುತ್ತರಅಳಿಸಿ
 14. ಹೆಗ್ಡೆ ಸರ್, ತೇಜಸ್ವಿನಿ ಮೇಡಂ, ಪ್ರವರ.. ಮೆಚ್ಚಿ ಪ್ರತಿಕ್ರಿಯಿಸಿದ್ದಿಕ್ಕೆ ಧನ್ಯವಾದಗಳು..

  ಪ್ರತ್ಯುತ್ತರಅಳಿಸಿ