ಸೋಮವಾರ, ಡಿಸೆಂಬರ್ 5, 2011

ದೂರಗುತ್ತಿದ್ದಾನೆ...

ದುರಾದೃಷ್ಟ ಅನ್ನೋದು ಎಷ್ಟು ಕೆಟ್ಟದು ನೋಡು..!!
ಪಾರ್ಕಿನ ಮೂಲೆಯ ಬೆಂಚೊಂದರಲ್ಲಿ ಗಂಟೆಗಟ್ಟಲೆ ತನ್ನವನಿಗಾಗಿ ಕಾದು ಕೂರೋ ಹುಡುಗಿ, ಕೊನೆಗೊಮ್ಮೆ ಕತ್ತಲಾವರಿಸತೋಡಗಿದಾಗ  ಮನೆಯ ದಾರಿ ಹಿಡಿಯುತ್ತಾಳೆ. ಮನೆಗೆ ಬಂದು ತಾಸಿನ ಮೇಲೆ ಅವನ ಮೆಸೇಜ್ ಇರುತ್ತದೆ "ಬ್ಯುಸಿ ಇದ್ದೆ ಬರಲಾಗಲಿಲ್ಲ..sorry .." ಅವನೊಂದು ಸೆಕುಂಡಿನ ಮೆಸೇಜು ತಾಸುಗಟ್ಟಲೆ ಪರಿತಪಿಸಿದ, ಕಾಡು ಬೆಂಡಾದ ನೋವನ್ನು ತನ್ನೊಳಗೆ ಅವನನ್ನು ಕಾಣಲಿದ್ದ ಆಸೆ - ಬಾರದಿದ್ದಾಗ ಬಂದ ಕೋಪ, ಅಸಹನೆ ಎಲ್ಲವನ್ನು ಮರೆಸಿ ಬಿಡುತ್ತ..?

ಬೆಳಿಗ್ಗೆಯಷ್ಟೇ ಹೇಳಿರುತ್ತಾನೆ,ಈಗ ಮುಖ್ಯವಾದ ಕೆಲಸ ಇದೆ ಸಂಜೆ ಫ್ರೀ ಆಗಿ ಕಾಲ್ ಮಾಡ್ತೀನಿ ಮಾತಾಡೋಣ...ಸಂಜೆಯ ಅವನ ಕರೆಗೆ ಚಾತಕದಂತೆ ಕಾಯುತ್ತಿರುವಾಗ ಅವನೊಂದು ಮೆಸೇಜು ರಪ್ಪನೆ ರಾಚುತ್ತದೆ ಫ್ರೆಂಡ್ಸ್ ಜೊತೆ ಆಚೆ ಇದ್ದೀನಿ ಮಲಗ್ತಾ ಮೆಸೇಜ್ ಮಾಡ್ತೀನಿ...ಹುಡುಗಿ ಮೃದುವಾಗುತ್ತಾಳೆ..ಸರಿ!!

ಆದರೆ ಮನಸ್ಸೆಂಬುದೊಂದು ಉಂಟಲ್ಲ..?!
ಅದು ಹಿಂದಿನದನ್ನು ಕೆದಕುತ್ತದೆ..ಬೇಡವೆಂದರೂ ಕೇಳದೆ!
ಅವನ ದಿನದ ಎಲ್ಲ ಮೆಸೇಜುಗಳು ತನಗಾಗಿಯೇ ವ್ಯವವಾಗುತ್ತಿದ್ದುದು, ಅದೆಷ್ಟು ಮಾತಾಡಿದರೂ ತೃಪ್ತಿಯೇ ಇಲ್ಲವೆಂದು ದುಪ್ಪಟ್ಟ ಜಗ್ಗಿಸಿ ಕೂರಿಸಿಕ್ಕೊಂಡಿದ್ದು , ನಿದ್ದೆ ಇಲ್ಲದ ರಾತ್ರಿ...ಆದರೂ ಬರಿ ಕನಸುಗಳೇ ಎನ್ನುತ್ತಾ ನನ್ನೊಳಗೂ ಆ ಕನಸುಗಳನ್ನು ಬಿತ್ತಿದ್ದು..
ಆ ದಿನಗಳಲ್ಲಿ ಈ "ಬ್ಯುಸಿ" ಎಲ್ಲಿ ಅವಿತಿತ್ತು?!
ಆಶ್ಚರ್ಯವಾಗುತ್ತದೆ..
ಆದರೂ ಅವನನ್ನೊಮ್ಮೆ ಕಂಡು ಮಾತಾಡಿಸುವ ಹಂಬಲ ಕಡಿಮೆಯಾಗಿರುವುದಿಲ್ಲ...ಕಾಯುತ್ತಾಳೆ....

ಇನ್ನೇನು ಮಲಗುವ ಸಮಯ ಎಂದುಕ್ಕೊಂಡು ಮೆಸೇಜು ಮಾಡಿದರೆ "i'm tired, catch u tomorrow" ಅವನ ರಿಪ್ಲೈ ...
ನಾಳೆ ಇದಕ್ಕಿಂತ ಬಿನ್ನವೇನಲ್ಲ..!!
ಅವಾಯ್ಡ್ ಮಾಡುತ್ತಿರುವುದನ್ನು ಹುಡುಗಿ ಮನಸ್ಸು ಸ್ಪಷ್ಟವಾಗಿ ಗುರುತಿಸಿಕ್ಕೊಂಡಿದ್ದರೂ ಒಪ್ಪಿಕ್ಕೊಳ್ಳಲು ತಾಯಾರಿಲ್ಲ...! ಬಿಕ್ಕಿ ಬಿಕ್ಕಿ ಅಳುತ್ತಳಷ್ಟೇ..

ಹರೆಯದ ಪ್ರೀತಿ ದಿನಕಳೆದಂತೆ ಹಳತಾಗುವ ಬಗೆ ಹೀಗೆಯೇ....!
ಹುಡುಗ ಏನೆಂದರೆ ಏನು ಹೇಳುವುದಿಲ್ಲ...ಬ್ಯುಸಿ ಅನ್ನುವುದೊಂದು ಬಿಟ್ಟು..
ಅವಳು ತಾನೇ "ಬೇಕಿದ್ದರೆ" ಕಾಯುತ್ತಾಳೆ ಅನ್ನೋ ಉಡಾಫೆ..

ಬಿಟ್ಟು ಬಿಡು ಹುಡುಗಿಯೇ 
ಅವನು ದೂರಗುತ್ತಿದ್ದಾನೆ ...
ಯಾರಿಗೆ ಬೇಕೇ ಜಂಜಾಟ ಹುಡುಗಿ?
ಅತ್ತು ಬಿಡು ಒಮ್ಮೆ ಜೋರಾಗಿ 
ಡವಡವ ಬಡಿಯುವ
ಎದೆಸದ್ದು ತಹಬದಿಗೆ ಬರಲಿ
ನಿನ್ನ ಬದುಕಿದು 
ಪೂರ್ತಿಯಾಗಿ ಬದುಕಿ ಬಿಡೆ ಹುಡುಗಿ..
ಬವಣೆಗಳು ಸಾಕಿನ್ನು....!!


========================================================
ನನ್ನ ಲೇಖನಕ್ಕೆ ಲಲಿತಾ ಪೂಜಾರಿ ಮಾಡಿದ ಫೋಟೋ ಶಾಪ್ ವರ್ಕ್..


10 ಕಾಮೆಂಟ್‌ಗಳು:

 1. ಯಾಕೋ ಕಣ್ಣಂಚಿನಲ್ಲಿ ಭಾರವಾದ ಹನಿ! ಇದು ಹುಡುಗಿಯಿಂದ ಹುಡುಗನಿಗೂ ಆಗಬಹುದು ಅಥವಾ ಉಲ್ಟಾನೂ ಇರಬಹುದು. ಒಟ್ಟಾರೆಯಾಗಿ ಕಾಯೋದು ಬಲು ಹಿಂಸೆ...

  ಒಳ್ಳೆಯ ಲೇಖನ.

  ನನ್ನ ಬ್ಲಾಗಿಗೂ ಬನ್ನಿರಿ:
  www.badari-poems.blogspot.com
  www.badari-notes.blogspot.com

  ಪ್ರತ್ಯುತ್ತರಅಳಿಸಿ
 2. ತುಂಬಾ ಚಿಕ್ಕ...

  ಆದರೆ ಎಷ್ಟು ನಾಜೂಕಾಗಿದೆ.....

  ಗೊತ್ತಾಗೋದ್ರೊಳ್ಗೆ ಕಣ್ಣಿರು ಬಿದ್ದು ಮಾಯವಾಗೋ ಹಾಗೆ.

  ಇಷ್ಟವಾಯ್ತು

  ಪ್ರತ್ಯುತ್ತರಅಳಿಸಿ
 3. ಚನ್ನಾಗಿದೆ........

  ಇಲ್ಲಿಯ ಹುಡುಗಿಯ ಪಾತ್ರ ಕೆಲವೊಮ್ಮೆ ಹುಡುಗರಿಗೂ ಅನ್ವಯಿಸುತ್ತದ್ದೆ

  ಪ್ರತ್ಯುತ್ತರಅಳಿಸಿ
 4. ಒಳ್ಳೆಯ ನಿರೂಪಣೆ....
  ಪ್ರಾಯಶಃ ಇದು ಎಲ್ಲರ ಜೀವನದಲ್ಲೂ ನಡೆಯುವ ಘಟನೆ..ಈ ರೀತಿಯ ಸನ್ನಿವೇಶಗಳನ್ನು ಗೆದ್ದು ಬಂದ ಬಂಧವೇ ಗಟ್ಟಿ ಎಂಬುದು ನನ್ನ ಭಾವನೆ.

  ಕಾಯಬೇಕು ಹೊತ್ತು ಬರುವವರೆಗೆ
  ಪ್ರೀತಿ-ಸ್ನೇಹದ ಬುಟ್ಟಿ ಹೊತ್ತು ಬರುವವರೆಗೆ

  ಹೊರಬೇಕು ಪ್ರೀತಿಯ ಬುಟ್ಟಿಯ ಕಾಲ ಬರುವವರೆಗೆ
  ಅದರೊಳಗಿನ ಹಣ್ಣಿನ ರುಚಿಯ ತಿಳಿಸುವವರೆಗೆ

  ಕಾಯಬೇಕು ಎಲ್ಲಿಯವರೆಗೆ???
  ಕಾದು ,ನಿಂತ ಕಾಲು ಕಾಯುವವರೆಗೆ!!!

  ಏನಂತೀರಿ??

  ಇತಿ ನಿಮ್ಮನೆ ಹುಡುಗ,
  ಚಿನ್ಮಯ ಭಟ್

  ಪ್ರತ್ಯುತ್ತರಅಳಿಸಿ
 5. ಬಹಳಷ್ಟು ಕಾಯಿಸಿದರೆ ಕಾದ ಕಾಲುಗಳು ಕುಸಿದು ಬೀಳುತ್ತದೆ ಅಲ್ಲವೇ ಚಿನ್ಮಯ್?
  ಪ್ರತಿಕ್ರಿಯೆಗೆ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 6. ಆಧುನಿಕ ಪ್ರೇಮಕ್ಕೆ ಮೈಲೇಜು ಕಮ್ಮಿಯಂತೆ ... ಕಟು ವಾಸ್ತವದ ನೈಜ ಚಿತ್ರಣ ಅನ್ನಬೇಕು ... ಈ ಪ್ರೀತಿ ಹಳತಾಗುವ ಪರಿಯನ್ನು ಮನ ಮುಟ್ಟುವಂತೆ ಚಿತ್ರೀಕರಿಸಿದ್ದೀರಿ ...

  ಪ್ರತ್ಯುತ್ತರಅಳಿಸಿ
 7. ಈ ಪ್ರೀತಿ ಮೇಲಿನ ಮೋಹ ಯಾರಿಗು ಬೇಡ ಪ್ರೀತಿ ಮೋಸ ಸಾವಿನ ಮನೆಯ ಬಾಗಿಲಿಗೆ ಸ್ವಾಗತಿಸುತ್ತದೆ.

  ಪ್ರತ್ಯುತ್ತರಅಳಿಸಿ
 8. ಓ ಮೌನ ಪ್ರೀತಿಯ ಹಂಚಿನ ದ್ಯಾನ
  ಎಲ್ಲಿ ನನ್ನ ಪ್ರೀತಿಯ ನಲ್ದಾಣ ???

  ಪ್ರತ್ಯುತ್ತರಅಳಿಸಿ