ಶನಿವಾರ, ಡಿಸೆಂಬರ್ 10, 2011

ಬಿಡದೆ ಬಿಟ್ಟಂತೆ...(ಜೊತೆಯಲಿದ್ದೂ ಇಲ್ಲವೆನ್ನುವ ನಿನಗೆ...! )


ಮುದ್ದು...


ನನಸಾಗದ ಕನಸುಗಳ ಉರಿಯಿನ್ನೂ ಆರಿಲ್ಲ..ದಹದಹಿಸುತ್ತಿದೆ..ತೀರಾ ಗೋಜಲು ಗೊಜಲಾಗಿರೋ ನಿನ್ನ ಮನಸ್ಥಿತಿ ಮತ್ತು ನಿರ್ಧಾರಗಳ ಬಗ್ಗೆ ಇನ್ನೊಂದು ಮಾತನಾಡಲಾರೆ ಎಂದು ಅವಡುಗಚ್ಚಿ, ನೋವುಗಳ ಒತ್ತೆಯಿಟ್ಟು ಬದುಕಿದ್ದೆ. ಇನ್ನಾಗದು ಗೆಳೆಯಾ...ನಿನ್ನ ಮಾತುಗಳನ್ನು,ನಿರ್ದಾರಗಳನ್ನು ಸಮ್ಮತಿಸಿ 'ದೂರವಿದ್ದು ಬಿಡೆ ಹುಡುಗಿ' ಅನ್ನೋ ಬುದ್ದಿಯಿದೆ.ಆದರೆ ಹ್ರದಯವೆಂದೊಂದು ಉಂಟಲ್ಲ..?ನಿನ್ನ ಮೌನದ ಬೆಂಕಿಯಲ್ಲಿ ಬೂದಿಯಾಗ ಹತ್ತಿದ್ದೇನೆ..
ಆಕಸ್ಮಿಕವಾಗಿ ಬಂದೆ ಬದುಕೆಂದರೆ ನೀನೇ ಎನಿಸಿಕ್ಕೊಳ್ಳುವಷ್ಟು ಪ್ರೀತಿಸಿಕ್ಕೊಂಡೆ, ಈಗ ಮತ್ತೇ ಹಿಂದಿರುಗುವ ದಾರಿಯಲ್ಲಿದ್ದಿಯ..ಇಲ್ಲಿ ನಾನೂ ಮಾತ್ರ ಒಬ್ಬಂಟಿ. ನೆನಪುಗಳೇ ಸಂಗಾತಿ . ಬದುಕಿನ ದಾರಿಯಲ್ಲಿ ಚಂದದ ಕನಸಿಟ್ಟು ಅದನ್ನೇ ಬೆಳಕಾಗಿಸುವ ಮಾತಾಡಿದವನು.. ನಾ ರಾಜ ನೀ ರಾಣಿ ಎನ್ನುತ್ತಾ ಕನಸಿನರಮನೆಯ ಕಟ್ಟಿದವನು, ಬದುಕಿನುದ್ದಕ್ಕೂ ಜೊತೆ ಇರುವೆ ಎಂದವನು, ಬಾಚಿ ತಬ್ಬಿ ಉಸಿರುಗಟ್ಟಿಸುವ ಬಾಹುಬಂಧನದಲ್ಲಿ 'ಎಂದೂ ನಿನ್ನವನೇ' ಎಂದೂ ಪಿಸುಗುಟ್ಟಿದವನು..ಎಲ್ಲಾ ಮರೆತು ಹಿಂದುರುಗುತ್ತಿಯಾ?!
ಹಾಗಂತ ನಮ್ಮ ಪ್ರೀತಿಯೇನು ಮುರಿದುಬಿತ್ತಾ..?ಎಂದರೆ ನನ್ನಲ್ಲಿ ಉತ್ತರವಿಲ್ಲ..ಜೋತೆಲಿದ್ದೂ  ಇಲ್ಲದಂತೆ ಇದ್ದಿಯಾ..ನಾನೂ ಇದ್ದೇನೆ ಬಿಡದೆ ಬಿಟ್ಟಂತೆ..ನಾಳೆ ಹೊರಡುವವ ನಾನೂ,ಇವತ್ಯಾಕೆ ಈ ಪರಿ ಪ್ರೀತಿಂತ ಇರ್ತಿಯಾ ಅಂತ ಅಣಕಿಸ್ತಿಯ..ಆದರೂ ನಾ ನಿನ್ನ ಕಂಗಳಲ್ಲಿ ಹುಡುಕೋದು ಅಳಿದುಳಿದ ನಮ್ಮ ಪ್ರೀತಿಯ ಅವಶೇಷವೇನಾದರು ಇರಬಹುದೇನೋ ಅಂತ..ಹೇಳದೆ ಕೇಳದೆ ನೀ ಬದುಕಿಂದ ಎದ್ದು ಹೋಗಿದ್ದರೆ ಮೋಸದ ಪ್ರೀತಿಯದು ಅಂದುಕೊಂಡು ಸಮಾದಾನಿಸಿಕ್ಕೋಳ್ಳಬಹುದಿತ್ತು ...ನಿನ್ನೊಂದಿಗಿನ ನನ್ನ ಪ್ರತಿದಿನ ಕ್ಷಣಗಳು ಅದ್ಯಾವುದೋ ಅಂಧಕಾರದ ಕೂಪಕ್ಕೆ ತಳ್ಳಲು ಸಾಕಷ್ಟು ತಾಲೀಮು ನಡೆಸಿರುವಂತಿದೆ...ಈ ಹೊತ್ತು  ನಿನ್ನ ಮೊಸಗಾರನೆನ್ನುವಂತಿಲ್ಲ..!

ಕೆಲವೊಮ್ಮೆ ನನಗೆ ನನ್ನನ್ನೇ ಸಮಾದಾನಿಸಾಲಾಗದ ಸ್ಥಿತಿಯಲ್ಲಿ ನೋವು,ಹತಾಶೆ,ದುಃಖ, ವಿರಹಗಳು ಹೀಗೆ ಹರಿದು ಬಿಡುತ್ತಾವೆ ಹುಡುಗಾ..ಕ್ಷಮಿಸು! ನಿನಗಾಗಿ ರಚ್ಚೆ ಹಿಡಿದು ಅಳುವುದರಿಂದ ಪ್ರಯೋಜನವಿಲ್ಲ ಎಂಬುದರ ಅರಿವಾಗಿದೆ. ಮುರಿದ ಮನಸ್ಸು ಈಗೊಂದು ತಹಬದಿಗೆ ಬಂದಿದೆ! ಮೌನವಾಗಿ..ಮೌನರಾಗ ಮೀಟುತ್ತಾ...ನಿನ್ನಿಂದ ಬದುಕಿನ ಅತಿದೊಡ್ಡ ಸಂತೋಷ ಸಿಕ್ಕಿದೆಯೆಂಬ ಭ್ರಮೆಯಲ್ಲಿ ದುಃಖದ ಮಡುವಿಗೆ ಬೀಳುವ ಕಲ್ಪನೆಯಿಲ್ಲದೆ ಬಿದ್ದೆ..ಮತ್ತೇ ಮೇಲೆಳಲಾಗದಂತೆ..ನೋವು, ಕಣ್ಣಿರನೆಲ್ಲ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ನೀ ಜೊತೆ ಇರುವಷ್ಟು ದಿನ ಸಂತೋಷದ ಸೋಗೆ ಹಾಕಿಕೊಂಡಿರೋಣ ಎಂದು.ನೀ ಬಿಟ್ಟುಹೋದ ದಿನ ನನ್ನುಸಿರು ನಿಲ್ಲುವ ಭರವಸೆಯು ಇಲ್ಲ ನನಿಗೆ.
ನಿನ್ನನ್ನು ಜೀವ ಮತ್ತು ಜೀವದುಸಿರಂತೆ ಪ್ರೀತಿಸಿಕ್ಕೊಂಡವಳು  ನಾನು..ಬಿಟ್ಟು ಹೋಗಬೇಡ ಎಂದರೆ ನೀ ತಾಯರಿದ್ದಿಯ ..?! ನಾ ಹಠಕ್ಕೆ  ಬಿದ್ದರೆ ನನ್ನ ಪ್ರೀತಿ ನನಗೆ ದಕ್ಕಿತಾ?ಎರಡು ಸಾದ್ಯವಿಲ್ಲದವುಗಳು.. ನಿನ್ನ ನಿರ್ಧಾರಕ್ಕೆ ನನ್ನದು ಸಮ್ಮತಿಯಿದೆ..ಹೋಗುವುದಾದರೆ ಹೋಗಿಬಿಡು..ನೀ ಕೊಟ್ಟ ಸಂತೋಷಗಳನ್ನು ಬದುಕಿನುದ್ದಕ್ಕೂ ಜತನವಾಗಿರಿಸುತ್ತೇನೆ..

4 ಕಾಮೆಂಟ್‌ಗಳು:

 1. ಹೋಗುವುದಾದರೆ ಹೋಗಿಬಿಡು
  ನೀ ಹೀಗೆ ಕಾಡಬೇಡ.....
  ಕವಿತೆ ನೆನಪಾಗ್ತಿದೆ....
  ಪ್ರೀತಿಯೇ ಹಾಗೆ...
  ಬರುವಾಗ ಬೆವರಿನಂತೆ......
  ಬಂದಿದ್ದೇ ಗೊತ್ತಾಗುವುದಿಲ್ಲ.....
  ಪ್ರೀತಿಯನ್ನು ಬಿಡಬೇಕೆಂದರೆ ಅದೂ ಆಗೋದಿಲ್ಲ....
  ಎಷ್ಟು ಒರೆಸಿದರೂ ಹಿಡಿದಿರುವ ಬೆವರಿನ ಜಿಗಟಿನಂತೆ....

  ಚನ್ನಾಗಿ ಬರೆದಿದ್ದೀರಿ....
  ಇಷ್ಟವಾಯ್ತು....

  ಪ್ರತ್ಯುತ್ತರಅಳಿಸಿ
 2. ಹೇಳದೆ ಕೇಳದೆ ನೀ ಬದುಕಿಂದ ಎದ್ದು ಹೋಗಿದ್ದರೆ
  ಮೋಸದ ಪ್ರೀತಿಯದು ಅಂದುಕೊಂಡು ಸಮಾದಾನಿಸಿಕ್ಕೊಳ್ಳಬಹುದಿತ್ತು:-
  ಹಾಗಾದ್ರೆ ಹೇಳದೇ ಕೇಳದೇ ಬಿಟ್ಟು ಹೊರಟು ಹೋದರೆ..?
  ಅದು ಮೋಸದ ಪ್ರೀತಿಯೆಂದರಿತುಕೊಳ್ಳಬೇಕೆ..? :)

  ನಿನ್ನಿಂದ ಬದುಕಿನ ಅತಿದೊಡ್ಡ ಸಂತೋಷ ಸಿಕ್ಕಿದೆಯೆಂಬ ಭ್ರಮೆಯಲ್ಲಿ:-
  ಅದಕ್ಕೆ ಆ ಸಂತೋಷಗಳನ್ನು ಸಂ'ಭ್ರಮ' ಅಂತಾರೆ..
  ಮಕರಂದ ಸಿಕ್ಕ 'ಭ್ರಮ'ರದ ಸಂ'ಭ್ರಮ'ವೂ ಆ ಕ್ಷಣದ 'ಭ್ರಮೆ'ಯಷ್ಟೇ..! :(

  ನನ್ನುಸಿರು ನಿಲ್ಲುವ ಭರವಸೆಯು ಇಲ್ಲ ನನಗೆ:
  ಈ ಪ್ರೀತಿಲೀ ಭರವಸೆ ಅನ್ನೋ ಮಾತಿಗೆ ಬೆಲೆ ಇಲ್ಲ ಅಂದಮೇಲೆ
  ಇನ್ನು ಅದನ್ನೇ ಮೈಗೂಡಿಸಿಕೊಂಡಿರುವ ಉಸಿರಲ್ಲಿರುತ್ತಾ..?? :'(

  ಕೊಟ್ಟ ಸಂತೋಷಗಳನ್ನು ಬದುಕಿನುದ್ದಕ್ಕೂ ಜತನವಾಗಿರಿಸುತ್ತೇನೆ:
  ಇದೋದೇ ಬಾಳ ಸಂಗಾತಿ., ಉಸಿರಿರುವತನಕ ಅವೇ ಸವೆಯದ "ಸವಿನೆನಪುಗಳು" ♥ ♥

  ಪ್ರತ್ಯುತ್ತರಅಳಿಸಿ
 3. ರಾಘವ್ ಸರ್, ಮಲ್ಲಿಕಾರ್ಜುನ ಸರ್, ವಿದ್ಯಾ ಮೇಡಂ.....ಪ್ರತಿಕ್ರಿಯೆಗೆ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ