ಶನಿವಾರ, ಡಿಸೆಂಬರ್ 17, 2011

ಪರಿ..


ಎಣೆಯಿಲ್ಲದ ಬವಣೆಗಳು
ಎಡಬಿಡದೆ ಕಾಡುತಿರೆ
ಗುರಿಯಿಲ್ಲದ ದಾರೀಲಿ 
ಗತಿಗೆಟ್ಟು ಹೋಗುತಿರೆ
ಬಿಸಿಲ್ಗುದುರೆಯ ತಾಪ
ಬೆಂಬಿಡದೆ ತಟ್ಟುತಿರೆ
'ಅಂದು-ಕೊಂದ'ವರೆಷ್ಟು?
ಸುಟ್ಟ ಕನಸುಗಳಲ್ಲಿ 
ಜೀಕುವ ಗಟ್ಟಿ ಬದುಕು!
ಚಿಂತೆಗಳ ಸಂತೆಯಲ್ಲಿ
ರಾಶಿ ನೆನಪುಗಳ ಕಂತೆ
ಕಣ್ಣಂಚು ದಾಟಿ ಬರಲು
ತವಕಿಸುವ ಹನಿಗೆ
ನಿನ್ನ ಸ್ವರ್ಶ..
ಎದೆಯ ಮಿದುವೊಳಗೆ
ಹೆಪ್ಪುಗಟ್ಟಿ ಕೂತ 
ದುಃಖಸಾಗರ 
ನಿನ್ನೊಳಗೆ ಹರವಿ ಹೋದ
ಪರಿ ಹೇಗೆ?!
5 ಕಾಮೆಂಟ್‌ಗಳು:

 1. ನೊ೦ದ ಹೃದಯಕ್ಕೊ೦ದು ಭಾವ ಸಿ೦ಚನ, ಉತ್ತಮ ಪ್ರಯತ್ನ ಸುಶ್ಮಾ ಅವರೆ. ವಿಷಯ ಆತ್ಮೀಯವಾಗಿದೆ. ನಿರೂಪಣೆ ಮತ್ತಷ್ಟು ಗಟ್ಟಿಯಾಗಲಿ. ಅಭಿನ೦ದನೆಗಳು.

  ಅನ೦ತ್

  ಪ್ರತ್ಯುತ್ತರಅಳಿಸಿ
 2. ಈ 'ಪರಿ'ಯ ನಾನೆಂತು ಬಣ್ಣಿಸಲಿ..??
  ಆ 'ಪರಿ'ಯ ವೈಖರಿಯೇ ವಿಸ್ಮಯ..! :)

  ಪ್ರತ್ಯುತ್ತರಅಳಿಸಿ
 3. ಅನಂತ್ ಸರ್, ನಿಮ್ಮ ಸಲಹೆ ಸೂಚನೆಗಳೇ ನನಗೆ ದಾರಿದೀಪ....
  ಧನ್ಯವಾದಗಳು....

  ಮಲ್ಲಿಖಾರ್ಜುನ್ ಗೌಡ್ರೆ, ಪ್ರತಿ ಪ್ರಯತ್ನಕ್ಕೂ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರಿ...ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ