ಮಂಗಳವಾರ, ಡಿಸೆಂಬರ್ 27, 2011

ಅಮ್ಮ ಫೋನ್ ನಲ್ಲಿ ಒಂದು ಗಂಟೆ ಲೆಕ್ಚರ್ ಕೊಟ್ಟು ಬಿಟ್ಲು ನಿನ್ನಿಂದಾಗಿ. ಅಲ್ಲೇ ಇದ್ಕೊಂಡು ಅದೆಂಥ ಫಿಟ್ಟಿಂಗ್ ಇಡ್ತಿಯೋ ಮಾರಾಯಾ..?ದೂರ ಇದ್ರೂ ಕಾಡೋದು ಬಿಟ್ಟಿಲ್ವಲ್ಲೋ..ಪಾಪಿ! ನಾನು ಇಂಜಿನಿಯರಿಂಗ್ ಮಾಡ್ತಿರೋದೆ ದಂಡಿ ಅಂದು ಬಿಟ್ಲು ಅಮ್ಮ .ನೀನು ಮಾತ್ರ ಬಿ.ಎ ಮಾಡ್ತಾ ಹೀರೋ ಆಗ್ಬಿಟ್ಟೆ ನೋಡು. ಮೂರು ಸೆಮ್ ಕಳೆಯೋವಷ್ಟರಲ್ಲಿ ಕಾಲೇಜ್ ನಲ್ಲಿ ನಿಂದೆ ಕಾರುಬಾರಂತೆ..ಕತೆ,ಕವನ,ಪ್ರಬಂಧ,ಭಾಷಣ ಅಂತೆಲ್ಲ ಬಹುಮಾನಗಳ ಮೇಲೆ ಬಹುಮಾನ, ಸ್ಕಾಲರ್ ಶಿಪ್ಪು ಎಲ್ಲ ಬಾಚ್ಕೊತ ಇದ್ದೀಯಂತೆ..ಅಮ್ಮ ಹೇಳಿದ್ಲು. ಇಲ್ಲಿ ನಿನ್ಹಾಗೆ ಇದ್ರೆ 'ಗಾಂಧಿ' ಅಂತ ರೆಗಿಸ್ತಾರೆ ಕಣೋ..ನಂಗಂತೂ ಆ ಪಟ್ಟ ಬೇಡಪ್ಪ..! ಇದನ್ನ ಸ್ವಲ್ಪ ನಿನ್ನತ್ತೆಗೆ ಬಿಡಿಸಿ ಹೇಳು. ಇಷ್ಟಕ್ಕೂ ಒಂಚೂರು ಜಾಲಿಯಾಗಿರೋದನ್ನ ರೂಡಿಸಿಕೋ ಮಾರಾಯ..ಕಾಲೇಜು ಲೈಫಿದು. ಮತ್ತೇ ನೀನು ಕನ್ನಡ ಮೇಷ್ಟ್ರಾಗಿ ದಪ್ಪ ಕನ್ನಡಕ ಮೂಗಿಗೇರಿಸಿಕ್ಕೊಂಡಿದ್ದಾಗ  ಈ ಸಮಯ ದಕ್ಕುವುದಿಲ್ಲ ನೋಡು...

Hmm...ಇಷ್ಟಕ್ಕೂ ನಿನ್ನ ಹೊಗಳಿದ್ದಕ್ಕೆ ನನ್ನದೇನೂ ಬೇಜಾರಿಲ್ಲಪ್ಪ...ಈಗೀಗ ಅದು ಮಾಮೂಲು..! ನನಲ್ಲಿ ಇಲ್ಲದ್ದಕ್ಕೆ ಅಲ್ಲವಾ ನಿನಗೇ ಎಲ್ಲ ಸಿಗುತ್ತಿರುವುದು! ಇಲ್ಲಂತೂ ಹಾಗಿರುವುದಕ್ಕೆ ಸಾದ್ಯವಿಲ್ಲ ( ಅಲಿಖಿತ ನಿಯಮ!!) ಇರುವೆಲ್ಲಾ ಟೈಮು ಹರಟೆ, ಕ್ಯಾಂಟೀನ್, ಮತ್ತೇ ಸ್ವಲ್ಪ ಸಮಯ ಕಾರಿಡಾರ್ ನಲ್ಲಿ ಆಚೀಚೆ ತೀರುಗಾಡುತ್ತಾ, ಲೈನ್ ಹೊಡಿಸಿಕೊಳ್ಳುತ್ತ ಕೊಳೆದು ಹೋಗುತ್ತದೆ ನೋಡು..ಇನ್ನು ಹಾಸ್ಟೆಲ್ ಮುಟ್ಟಿದರೆ ತಮಾಷೆಯ ಯೋಗವಿಲ್ಲ...ಪುಸ್ತಕ್ಕವನ್ನೇ ಅರೆದು ತಿನ್ನಬೇಕು, ಕುಡಿಯಬೇಕು ಎನ್ನುವಂತೆ ಸ್ಟ್ರಿಕ್ಟ್ ವಾರ್ಡನ್.. ಈ ಮದ್ಯೆ ಬಹುಮಾನದ ಸ್ಪರ್ದೆಗಳಿಗೆ ಹೋಗೋಕೆ ಪುರುಸೊತ್ತು ಎಲ್ಲಿದೆಯೋ ನಾ ಕಾಣೆ!


ಹೌದೂ.., ಕಾಲೇಜ್ ಗೆ ನೀನೆ ಹೀರೋ ಎಂದ ಮೇಲೆ, ನಿಂಗೊಬ್ಬಳು ರಾಜಕುಮಾರಿ ಸಿಕ್ಕರಲೇ ಬೇಕಲ್ಲವಾ..?
ಸಿಕ್ಕಿದಳಾ..? ಲೈನ್ ಹೊಡೆಯೋಕೆ ಬರದ ಪೆದ್ದು ನೀನು, ಸಿಕ್ಕಿರೋಲ್ಲ ನಂಗೆ ಗೊತ್ತು..
ಬಟ್ ನಾನು ನಿನ್ನ ಹಾಗಲ್ವೆ...ನನ್ ಕಥೆ ಕೇಳು..

ಭರತ ಅಂತ ನನ್ ಸಿನಿಯರ್ರು. ನಮ್ಮ ಕ್ಲಾಸ್ ರೂಂ ಮುಂದೆ ತುಂಬಾನೇ ಅಡ್ಡಾಡ್ತಾ ಇರ್ತಾನೆ. ವಿಜಿ ಹತ್ರ ನನ್ ನಂಬರ್ ರ್ರೂ ಕೇಳಿದನಂತೆ. ನಾವೋ ಹುಡುಗೀರು ಇಂಥ ವಿಷಯದಲ್ಲಿ ಬೇಗ ಮೈಂಡ್ ಅಗ್ತಿವಿ.(ನಿನ್ನಂಥ ಸೈಲೆಂಟ್ ಹುಡುಗರ ಕತೆ ನಮಗೆ ಗೊತ್ತಾಗಲ್ಲ ಮಾರಾಯ..! ) ಇಷ್ಟರಲ್ಲಿ ಅವ್ನು ಒಳ್ಳೆ ನೇಚರ್ ಹುಡ್ಗ, ಬ್ರಿಲಿಯೆಂಟ್ ಸ್ಟುಡೆಂಟ್ ಅಂತ ಅವನ ಬಗ್ಗೆ ಸರ್ಟಿಫಿಕೇಟ್ ಕೊಡ್ತಾ ಇದ್ರು ಅವನ ಕ್ಲಾಸ್ ಗರ್ಲ್ಸ್. ನಮ್ ಭಾಷೇಲಿ ಹೇಳ್ಲಾ?! ಪೂಸಿ ಹೊಡಿತ ಇದ್ರು ಕಣೋ..! ಒನ್ ಫೈನ್ ಡೇ ಪ್ರಪೋಸ್ ಮಾಡೇ ಬಿಟ್ಟ..ಬೇಡ ಅನ್ನೋಕೆ ಮನಸೇ ಬರ್ಲಿಲ್ವೋ...!

ಇನ್ನೂ ಹೇಮಂತ್ ಇವ್ನು ನಂದೇ ಕ್ಲಾಸ್, ಇತ್ತೀಚಿಗೆ ನಮ್ಮ ಫ್ರೆಂಡ್ಸ್ ಸರ್ಕಲ್ ಗೆ ಸೆರ್ಕೊಂಡ ಹೊಸ ಹುಡುಗ..ಸ್ಟೈಲಿಶ್, ಹ್ಯಾಂಡ್ ಸಂ ....etc etc..! ಹುಡ್ಗೀರೆಲ್ಲ ಅವನ ಹಿಂದೇನೆ...ಇಂತಿಪ್ಪ ವೇಳೆಯಲ್ಲಿ, ಹೇಮಂತನೆ ಲವ್ವಿಗೆ ಆಫರ್ ರ್ರು ಕೊಟ್ಟೆ ಬಿಟ್ಟ , ನನ್ ಇನ್ನೋಸೆಂಟ್ ಫೇಸ್ ಅವಂಗೆ ಬಹಳ ಇಷ್ಟ ಅನ್ನೋದು ಕಾರಣ..ಹೊಸಬ ಅಲ್ವಾ, ನನ್ ಇನ್ನೋಸೆನ್ಸ್ ಬಗ್ಗೆ ಇನ್ನೂ ಗೊತ್ತಿಲ್ಲ..ಪಾಪ! ಇರಲಿ ಬಿಡು...ಹೆಂಗೋ ಬೇಡ ಅನ್ನೋದು? ಅಷ್ಟೊಂದೆಲ್ಲ ಹುಡ್ಗೀರು ಅವನ್ನ ಇಷ್ಟಪಡ್ತಾ ಇದ್ರೂ ಇಂವ ನನ್ನ ಇಷ್ಟಪಟ್ಟಗಾ...ಇಷ್ಟರ ಮೇಲೆ ಒಳ್ಳೆ ಹುಡ್ಗ ಅಂತ ಮನಸೂ ಬೇರೆ ಹೇಳ್ತಾ ಇತ್ತಲ್ಲ...
ಇಬ್ರಿಗೂ ಬೇಡ ಅನ್ನಲಿಲ್ಲ...ನಿಜ್ಜಾ..ರೈಸ್ ಆಗಿರೋ ಹಾರ್ಟ್ ಬೀಟ್ ನ ಕಮ್ಮಿ ಮಾಡ್ಕೋ..ಓಕೆ ಅಂತನೂ ಹೇಳಿಲ್ಲ..
ಟೈಮ್ ಕೇಳ್ದೆ...ಸಾತಾಯಿಸೋದ್ರಲ್ಲೂ ಎಂತಹ ಮಜಾ ಇರತ್ತೆ ಗೊತ್ತ?
ಕಾಲೇಜ್ ನಲ್ಲಿ ಆಲ್ ಮೋಸ್ಟ್ ಎಲ್ಲರಿಗೂ ಒಂದು ಪೇರ್ ಅಂತ ಇರೋವಾಗ ನಂಗೆ ಬೇಡ್ವಾ? ಪಾಕೆಟ್ ಮನಿ ಶಾರ್ಟೆಜ್ ಬಂದ್ರು ತೊಂದ್ರೆ ಇರೋಲ್ಲ...ಹೀಗೆಲ್ಲ ಯೋಚನೆ ಮಾಡಿ ಮಾಡಿ..ಅಂತೂ ಕಡೆಗೆ ಇಬ್ರಿಗೂ ಬೇಡ ಅಂದ್ಬಿಟ್ಟೆ.. ಆದ್ರೂ ಇಬ್ರೂ ಬಿಡೋ ಹಾಗೆ ಕಾಣ್ತಿಲ್ಲ..ಲವ್ವು ಲವ್ವು ಅಂತಿದಾರೆ..ನನಗೋ ಒಳಗೊಳಗೇ ಖುಷಿ. ಕಾರಣ ಕೇಳಬೇಡ!
ಇಷ್ಟಕ್ಕೂ ಇದು ಸ್ವಲ್ಪ ದಿನ ಅಷ್ಟೇ ಬಿಡು. ನನಗಿಂತ ಚಂದದೊಳು ಇನ್ನೊಬ್ಳು ಸಿಕ್ರೆ ತಾನಾಗೆ ದೂರ ಸರಿತಾರೆ..no problem. ಮತ್ತೂ ಬಿಟ್ಟಿಲ್ಲ ಅಂದ್ರೆ ನೀನು ಕಾಲೇಜ್ ಹತ್ರ ಬಂದ್ಬಿಡು.ನಿನ್ನನ್ನ ಅವರಿಬ್ರಿಗೆ ತೋರಿಸಿ ಬಿಡ್ತೀನಿ. ಆಗಂತೂ ಸುಮ್ಮನಾಗಲೇ  ಬೇಕಲ್ಲ..?

ಅವರಿಬ್ರ ಕಲರ್ ಮಾಡಿರೋ ಕೂದಲು, ಲೋವೆಸ್ಟ್ ಜೀನ್ಸ್ , ಬಣ್ಣ ಬಣ್ಣದ ಶೂಸ್ ಗಿಂತ ಸದಾ ಪಾರ್ಮಲ್ಸ್ ನಲ್ಲಿ ಇರೋ "ಪೆದ್ದಂಭಟ್ಟ " ನೀನೆ ಇಷ್ಟ ಕಣೋ..ನಿನ್ನ ಚಿಗುರು ಮೀಸೆಯ ಕೆಳಗೆ ಅಡಗಿರೋ ಆ ತುಂಟ ನಗು ಇನ್ನೂ ಇಷ್ಟ...

ಈ ತಲೆಹರಟೆನೆಲ್ಲ ..ಅಮ್ಮಂಗೆ ಹೇಳಿ ಬಿಡಬೇಡ ಮಾರಾಯ..ಫೋನ್ ನಲ್ಲೆ ಕ್ಲಾಸ್ ಶುರುವಾಗತ್ತೆ ಆಮೇಲೆ...


6 ಕಾಮೆಂಟ್‌ಗಳು:

 1. ಆ ನಿಮ್ಮ ಪೆದ್ದು ಹುಡುಗ ಇದನ್ನ ಓದಿದ್ರೆ ತುಂಬಾನೆ ಖುಷಿಯಾಗ್ತಾನೆ ಕಣ್ರಿ, ಚೆನ್ನಗಿದೆ ಬರಹ

  ಪ್ರತ್ಯುತ್ತರಅಳಿಸಿ
 2. ಹ್ಹ ಹ್ಹ ಹ್ಹ ತುಂಬಾ ಚೆನ್ನಾಗಿದೆ "ಪೆದ್ದುಗುಂಡಿ"...
  ಆ "ಪೆದ್ದಂಭಟ್ಟ"ನ ಆ ದೇವರೇ ಕಾಪಾಡಬೇಕು...
  ಪಾ..ಪಾ.. ಹುಡುಗಾ.......

  ಪ್ರತ್ಯುತ್ತರಅಳಿಸಿ
 3. ಧನ್ಯವಾದಗಳು ಪ್ರವರ...
  ಪೆದ್ದು ಹುಡುಗಾ ಇದನ್ನ ಓದಿ, ಮೊದಲೊಮ್ಮೆ ಸಿಟ್ಟಿಗೆದ್ದಾನು..ಬೇರೆ ಹುಡುಗರ ವಿಷಯವನ್ನೆಲ್ಲ ಬರೆದಿದ್ದಿನಲ್ಲ...
  ಅದರೂ ಮತ್ತೊಮ್ಮೆ ಖುಷಿಯಾಗೆ ಆಗುತ್ತಾನೆ, ನೀವು ಹೇಳಿದಂತೆ... ಕರು ಊರೆಲ್ಲಾ ಸುತ್ತಿ ಬಂದರೂ ಮತ್ತೇ ತಾಯಿಯ ಹಸುವಿನ ಬಳಿಯೇ ಬರುತ್ತದಲ್ಲವೇ ಪ್ರೀತಿಗೆ?ಈ ಸತ್ಯ ಆ ಪೆದ್ದಂ ಭಟ್ಟನಿಗೆ ತಿಳಿಯದ್ದೇನೂ ಅಲ್ಲಾ..

  ಪ್ರತ್ಯುತ್ತರಅಳಿಸಿ
 4. ಗೌಡ್ರೆ...!! ಪಾ..ಪಾ..ಏನೂ ಅಲ್ಲಾ...ಪಾಪದ( ಸಾಧು ) ಹುಡುಗಿಗೆ ಅಷ್ಟೇ ಪಾಪದ ಹುಡುಗಾ ತಗಲಾಕಿಕ್ಕೊಂಡು ಬಿಟ್ಟಿದಾನೆ ಅಷ್ಟೇ..!
  ಪ್ರತಿಕ್ರಿಯೆಗೆ ಧನ್ಯವಾದ...

  ಪ್ರತ್ಯುತ್ತರಅಳಿಸಿ
 5. ಪ್ರೇಮದ ನವಿರು ನಿರೂಪಣೆ :)
  ಚೆನ್ನಾಗಿದೆ.

  ಪ್ರತ್ಯುತ್ತರಅಳಿಸಿ