ಶನಿವಾರ, ಡಿಸೆಂಬರ್ 31, 2011

ಗೆಳೆಯಾ..ಬಿರುಬಿಸಿಲಲ್ಲಿ ಮೈಮನ ತೋಯ್ವ ಸೋನೆ ನೀನು
ಆ ಕ್ಷಣ ಹೃದಯವ ಹಾರಿಸಿ ಕಚಗುಳಿ ಇಡುವ ತಂಗಾಳಿ ನೀನು 
ಕೇಳುವ ಆಸೆ ಎನಗೆ ನಿನ್ನಂತರಂಗದಲ್ಲೊಂದು ಜಾಗವನ್ನ 
ಬೇಡವೆಂದರೆ ಹೇಗೆ ಮರೆಯಲೋ ನಿನ್ನಾ..?ಆ ಸವಿ ಕನಸುಗಳನ್ನ.


ನೀನಿಲ್ಲದ ಜಗ ನಿಲುಕದು ಎನ್ನಯ ಕಲ್ಪನೆಗೆ 
ನಿನ್ನೊಲವಿನ ಹಸಿರುಗರಿಕೆಯ ಆಧಾರವದಕೆ 
ನಿನ್ನಯ ಸನಿಹ ಬಯಸಿದೆ, ಬೇಕೆನಿಸಿದೆ ಬಾರೆಯ?
ನಿನ್ನಯ ಪ್ರೀತಿ ತುಂಬಿದ ಹೃದಯವ ನೀಡೆಯಾ?

ಮೌನದಲ್ಲೇ ಮಾತಿನ ಹುಡುಕಾಟ ಗೆಳೆಯಾ 
ತುಟಿ ಕಂಪಿಸದ ಹೊರತು ಮಾತಿಲ್ಲವೇನೋ ಇನಿಯಾ
ಹೃದಯದ ಭಾಷೆಗೆ ಮಾತೇಕೆ 
ಅಲ್ಲೊಂದು ಪುಟ್ಟ ತಣ್ಣಗಿನ ನಗು ಇರುವಾಗ?

ದುಗುಡಗಳಿಗೆ ಬೇಕಿದೆ ನಿನ್ನ ಪ್ರೀತಿಯ ಗುಳಿಗೆ
ಈ ಕನಸು ಕಂಗಳ ತುಂಬೆಲ್ಲ ನಿನ್ನದೇ ಕನವರಿಕೆ
ಅನುರಾಗದ ಕಂಪಿನಲಿ ನಿನ್ನೊಲವಿನ ಕನಸುಗಳೊಂದಿಗೆ
ಇರುವೆನು ನಿನ್ನ ಜೊತೆ ಜೊತೆಯಲಿ..{ಪಿಯುಸಿ ನಲ್ಲಿ ಬರೆದ ಕವನ, ಡೈರಿ ಯೊಳಗೆ ಬೆಚ್ಚನೆ ಮಲಗಿತ್ತು...ಎಬ್ಬಿಸಿ ನಿಮ್ಮ ಮುಂದೆ ನಿಲ್ಲಿಸಿದ್ದೇನೆ...ಹೇಗಿದೆ ಎಂದು ಹೇಳ್ತಿರಲ್ಲ...?
}

12 ಕಾಮೆಂಟ್‌ಗಳು:

 1. ಹಸಿ ಹಸಿ ಮನಸಿನ..
  ಬಿಸಿ ಬಿಸಿ ಕನಸಿನ..
  ಸೊಗಸಿನ ಪ್ರೇಮಕವನ..

  ಬೋ.. ಪಸಂದಾಗಿದೆ....

  ನಿಮ್ಮ ಗೆಳೆಯನ ಹೃದಯದಿ
  ಜಾಗವ ಬೇಗ ಸಿಗಲಿ..
  ಅವನ ಪ್ರೀತಿ ತುಂಬಿದ
  ಹೃದಯ ನಿಮಗೆ ಸಿಗಲಿ..

  ಪ್ರತ್ಯುತ್ತರಅಳಿಸಿ
 2. "ತುಟಿ ಕಂಪಿಸದ ಹೊರತು ಮಾತಿಲ್ಲವೇನೋ ಇನಿಯಾ"
  "ಸುಟ್ಟ ಕನಸುಗಳಲ್ಲಿ, ಜೀಕುವ ಗಟ್ಟಿ ಬದುಕು!"
  ಸುಂದರವಾದ ಸಾಲುಗಳು
  ಬರೆಯುತ್ತಿರಿ
  ಸ್ವರ್ಣ

  ಪ್ರತ್ಯುತ್ತರಅಳಿಸಿ
 3. ಗಿರೀಶ್ ಸರ್ ,
  ಆವಾಗ ಬರೆದಿದ್ದನ್ನ ಈ ಹೊತ್ತು ಓದುವಾಗ ಹಾಗೆ ಸುಮ್ಮನೆ ನಗು...ಇದೂ ಒಂಥರಾ ಸವಿ ನೆನಪೇ ...ಪ್ರತಿಕ್ರಿಯೆಗೆ, ಹಾರೈಕೆಗೆ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 4. ಗೌಡ್ರೆ, ನಿಮ್ಮ ಹಾರೈಕೆ ಸದಾ ಹೀಗೆ ಇರಲಿ...ಧನ್ಯವಾದ..

  ಪ್ರತ್ಯುತ್ತರಅಳಿಸಿ
 5. ಸ್ವರ್ಣ ನಿಮ್ಮ ಪ್ರಶಂಸೆಯ ಮಾತಿಗೆ ಅಭಾರಿ..ಧನ್ಯವಾದಗಳು ..

  ಪ್ರತ್ಯುತ್ತರಅಳಿಸಿ
 6. ಬಿರುಬಿಸಿಲಲ್ಲಿ ಮೈಮನ ತೋಯ್ವ ಸೋನೆ ನೀನು
  ಆ ಕ್ಷಣ ಹೃದಯವ ಹಾರಿಸಿ ಕಚಗುಳಿ ಇಡುವ ತಂಗಾಳಿ ನೀನು
  ಎನ್ನುತ್ತಿರುವಿರಲ್ಲ ಯಾರವನಂಥ ನಾನು ತಿಳಿದುಕೊಳ್ಳಬಹುದೆ?
  ಕವನ ತುಂಬಾನೇ ಚೆನ್ನಾಗಿದೆ.

  ಪ್ರತ್ಯುತ್ತರಅಳಿಸಿ
 7. ಧನ್ಯವಾದಗಳು .....
  ಕನಸಿನ ರಾಜಕುಮಾರನ ಹೆಸರಿನ್ನು ತಿಳಿದಿಲ್ಲ ಮೇಡಂ....

  ಪ್ರತ್ಯುತ್ತರಅಳಿಸಿ
 8. ಹೆಸರಿಲ್ಲದ ಮುದ್ದುಕುಮಾರ ಯಾರವನು?

  ಪ್ರತ್ಯುತ್ತರಅಳಿಸಿ
 9. ಹೃದಯದ ಭಾಷೆಗೆ ಮಾತೇಕೆ ....
  ಚೆನ್ನಾಗಿದೆ ಭಾವ ...
  http://nenapinasanchi.wordpress.com/

  ಪ್ರತ್ಯುತ್ತರಅಳಿಸಿ