ಶನಿವಾರ, ಫೆಬ್ರವರಿ 18, 2012

ಹನಿಗಳು..
೧ .ಕಣ್ಣೋಟಕ್ಕೆ , ಪಿಸುಮಾತಿಗೆ
   ಕಾಡಿದ ಕನವರಿಕೆಗಳಿಗೆ
  ನೀಡಿದ ಮುತ್ತುಗಳಿಗೆ 
  ಅಡ್ಡಿ ಬಾರದ ಜಾತಿ,
  ಮದುವೆ ಅಡ್ಡಿಯಾಯಿತಂತೆ!


೨ . ಬದುಕು ಬರಿದಾಗುವ 
     ಮುನ್ನ-
    ನೀ ಬಂದು
    ಸೇರೆನ್ನ...


೪ . ಆ ನನ್ನ ನಲ್ಲ 
     ಮೆಹಂದಿಯ 
     ಚಿತ್ತಾರದೊಳಗೆ 
     ಇಣುಕುತಿರುವನಲ್ಲ..?


೩ . ನಾ ಸಿಕ್ಕಿ 
   ನಿನ್ನ ಕಾಡಿಸುವುದಕ್ಕಿಂತ
   ಸಿಗದೇ
   ನೀನೇ ಕಾಡಿಸಿಕ್ಕೊಳ್ಳುವುದು
   ಚಂದ ಅಲ್ಲವೇನೋ..?!

೫ .ನವುರು ನವುರು ಭಾವಗಳೆಲ್ಲ 
   ಬೂದಿ ಆಗಿಬಿಟ್ಟಿದೆ ಹುಡುಗಾ
   ಆರ್ದ್ರತೆಯ ಹನಿಯಿಲ್ಲ ಎದೆಯೊಳಗೆ 
   ಆವಿಯಾಗಿ ಬಿಟ್ಟಿದೆ 
  -ನನ್ನ ಕನಸುಗಳಂತೆ