ಶನಿವಾರ, ಫೆಬ್ರವರಿ 18, 2012

ಹನಿಗಳು..
೧ .ಕಣ್ಣೋಟಕ್ಕೆ , ಪಿಸುಮಾತಿಗೆ
   ಕಾಡಿದ ಕನವರಿಕೆಗಳಿಗೆ
  ನೀಡಿದ ಮುತ್ತುಗಳಿಗೆ 
  ಅಡ್ಡಿ ಬಾರದ ಜಾತಿ,
  ಮದುವೆ ಅಡ್ಡಿಯಾಯಿತಂತೆ!


೨ . ಬದುಕು ಬರಿದಾಗುವ 
     ಮುನ್ನ-
    ನೀ ಬಂದು
    ಸೇರೆನ್ನ...


೪ . ಆ ನನ್ನ ನಲ್ಲ 
     ಮೆಹಂದಿಯ 
     ಚಿತ್ತಾರದೊಳಗೆ 
     ಇಣುಕುತಿರುವನಲ್ಲ..?


೩ . ನಾ ಸಿಕ್ಕಿ 
   ನಿನ್ನ ಕಾಡಿಸುವುದಕ್ಕಿಂತ
   ಸಿಗದೇ
   ನೀನೇ ಕಾಡಿಸಿಕ್ಕೊಳ್ಳುವುದು
   ಚಂದ ಅಲ್ಲವೇನೋ..?!

೫ .ನವುರು ನವುರು ಭಾವಗಳೆಲ್ಲ 
   ಬೂದಿ ಆಗಿಬಿಟ್ಟಿದೆ ಹುಡುಗಾ
   ಆರ್ದ್ರತೆಯ ಹನಿಯಿಲ್ಲ ಎದೆಯೊಳಗೆ 
   ಆವಿಯಾಗಿ ಬಿಟ್ಟಿದೆ 
  -ನನ್ನ ಕನಸುಗಳಂತೆ 
 

10 ಕಾಮೆಂಟ್‌ಗಳು:

 1. ಅದೆಷ್ಟು ಭಾವಪೂರ್ಣ ಅರ್ಥ ಹೊಂದುವ ಸಾಲುಗಳು
  ನಾ ಸಿಕ್ಕಿ
  ನಿನ್ನ ಕಾಡಿಸುವುದಕ್ಕಿಂತ
  ಸಿಗದೇ
  ನೀನೇ ಕಾಡಿಸಿಕ್ಕೊಳ್ಳುವುದು
  ಚಂದ ಅಲ್ಲವೇನೋ..?!
  ತುಂಬಾ ಚೆನ್ನಾಗಿದೆ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ತುಂಬಾ ಧನ್ಯವಾದಗಳು ಮೇಡಂ.. ಮೆಚ್ಚಿ ಪ್ರತಿಕ್ರಿಯಿಸಿದ್ದಿಕ್ಕೆ...

   ಅಳಿಸಿ
 2. ಎಲ್ಲ ಹನಿಗಳಲೂ ಕಾವ್ಯಾತ್ಮಕತೆ ಮತ್ತು ಭಾವನೆಗಳು ತುಂಬಿವೆ.
  5*

  ಪ್ರತ್ಯುತ್ತರಅಳಿಸಿ
 3. ಸುಶ್ಮಾ ಎಲ್ಲಾ ಚನ್ನಾಗಿವೆ
  ಆದರೆ ನನ್ನ ಮನಸಿಗೆ ನಾಟಿದ್ದು
  ನವುರು ನವುರು ಭಾವಗಳೆಲ್ಲ

  ಬೂದಿ ಆಗಿಬಿಟ್ಟಿದೆ ಹುಡುಗಾ

  ಆರ್ದ್ರತೆಯ ಹನಿಯಿಲ್ಲ ಎದೆಯೊಳಗೆ

  ಆವಿಯಾಗಿ ಬಿಟ್ಟಿದೆ

  -ನನ್ನ ಕನಸುಗಳಂತೆ

  ಪ್ರತ್ಯುತ್ತರಅಳಿಸಿ
 4. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್....

  ಪ್ರತ್ಯುತ್ತರಅಳಿಸಿ
 5. ಪ್ರತಿಯೊಂದು ಹನಿಯಲ್ಲೂ ಭಾವದುಂಧುಬಿ.... ಥಟ್ಟನೆ ಸೆಳೆದು .. ಕಾಡುವ ಹನಿಗಳು ....
  http://nenapinasanchi.wordpress.com/

  ಪ್ರತ್ಯುತ್ತರಅಳಿಸಿ
 6. ಮೆಚ್ಚುಗೆಗೆ ಧನ್ಯವಾದಗಳು ನೆನಪಿನ ಸಂಚಿಯಿಂದ...

  ಪ್ರತ್ಯುತ್ತರಅಳಿಸಿ