ಸೋಮವಾರ, ಮಾರ್ಚ್ 5, 2012

ಸಾರಾಯಿ..


ಚಿಂತೆ ಕಾಡದು ಕುಡಿದಾಗ ಹೆಂಡ 
ಆಗ ಕಾಣದು ಬದಿಯಲ್ಲಿದ್ದರೆ ಹೊಂಡ
ಮಡದಿ ಬೈದರೆ ಎನ್ನುವಿ,
ಸುಮ್ಮನಿರು ನಾ ನಿನ್ನ ಗಂಡ
ಕೊನೆಗೆ ಗೊತ್ತಾಗುವುದು ನೀನೊಬ್ಬ ದಂಡಪಿಂಡ

ಕುಡಿಯಲು ಬೇಕು ಸಾರಾಯಿ
ಅದ ಕೊಳ್ಳಲು ಬೇಕು ರೂಪಾಯಿ
ಆಗ ಕುಡಿದು ಹುಚ್ಚನಂತೆ ಹೇಳುವಿ 
ಈಗ ನಾನೇ ಇಲ್ಲಿ ದಳವಾಯಿ
ಆಗ ಹೇಳುವರೆಲ್ಲಾ ನೀನೊಬ್ಬ ನಿಜವಾದ ನಾಯಿ

ಶರಾಬು ಆರೋಗ್ಯಕ್ಕೆ ಹಾನಿಕಾರಕ 
ಕುಡಿಯದಿದ್ದರೆ ಶುಭದಾಯಕ 
ಒಂದು ವೇಳೆ ಕುಡಿದರೆ
ರೋಗ ಬಂದು ಕಾಣುವಿ ನೀ ನರಕ
ನಂತರ ಉಳಿಯುವುದೊಂದೇ ನಿನ್ನ ಸ್ಮಾರಕ {When I was in 8th standard, I wrote this....}
 

15 ಕಾಮೆಂಟ್‌ಗಳು:

 1. Gud sushiii.... nice lines... innu heege baritha iri...nim blog nammannu agaga intha post gagi kareyutthirali...!!

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಪ್ರೋತ್ಸಾಹ ಇದ್ದಾರೆ ಖಂಡಿತ ಮತ್ತಷ್ಟು ಬರಿಯಬಹುದು ಶಶೀ...
   ಧನ್ಯವಾದಗಳು ನಿಮ್ಮ ಅಕ್ಕರೆಯ ಪ್ರತಿಕ್ರಿಯೆಗೆ....

   ಅಳಿಸಿ
 2. ಪ್ರತ್ಯುತ್ತರಗಳು
  1. ಥಾಂಕ್ಸು ಮಾರಾಯರೆ ಮೆಚ್ಚಿ ಪ್ರತಿಕ್ರಿಯಿಸಿದ್ದಿಕ್ಕೆ....

   ಅಳಿಸಿ
 3. ಸಾರಾಯಿ ರುಚಿಗೊತ್ತಿಲ್ಲದಿದ್ದರೂ ಅದರ
  ಕೆಡುಕುಗಳನ್ನು ಚೆನ್ನಾಗಿ ವಿವರಿಸಿದ್ದೀರ.
  ;-) :-D
  ಸಧ್ಯ ಈಗ ಸರ್ಕಾರಗಳ ದಯೆಯಿಂದ ಸಾರಾಯಿ
  ಅಡ್ಡೆಗಳೂ ಮುಚ್ಚಿವೆ.
  ೮ನೇ ತರಗತಿಯಲ್ಲೇ ನಿಮ್ಮ ಕಾವ್ಯ ಪ್ರತಿಭೆ
  ಇಂತಹ ಸಾಮಾಜಿಕ ಕಳಕಳಿ ಮೂಲಕ
  ಅರಳಿದ್ದು ಅಭಿನಂದನೀಯ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಕಣ್ಣಿಗೆ ಕಂಡ ಕೆಟ್ಟ ಸತ್ಯಗಳು, ಅದರ ದುಷ್ಪರಿಣಾಮಗಳು ಇಂತದ್ದೊಂದು ಕವನದ ಹುಟ್ಟಿಗೆ ಕಾರಣವಾಗಿದ್ದಿರಬಹುದು... ಪ್ರಾಸ ಜೋಡಿಸುತ್ತ ಬರೆದ ರೀತಿಗೆ ನೆನಪುಗಳು ಉಕ್ಕಿ ಬಂದು, ನಗೆಯ ಬುಗ್ಗೆ ಹೊಮ್ಮುತ್ತದೆ....
   ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಸರ್...

   ಅಳಿಸಿ
 4. ನಿಮ್ಮ ಹರಕೆ-ಹಾರೈಕೆ , ಪ್ರತಿಕ್ರಿಯೆಗೆ ಧನ್ಯವಾದಗಳು ಸಿಸ್ಟರ್.....

  ಪ್ರತ್ಯುತ್ತರಅಳಿಸಿ
 5. yen helbeko gottagtilla... bt super saalugau.. antya prasada krama baddate hago saalugalu tiliya bayasuva vishya mathra adbutha... bt samajika kaalajiya jotege purusha pradhaya herikeyannu prashnisuva shaili adu kaviyinda nadeyuttide adare adarolage hendati prashniso hantakke bandirodannu pratipaadisodilla. ee reethi mugda manassugalige narakayatane needo manasugalanna samajika kalajiyinda tiraskarisuva manobhava 8ne classnalle ittu andre nimgondu nanna sellute....

  ಪ್ರತ್ಯುತ್ತರಅಳಿಸಿ
 6. sushma................. samajika vishayakke sambanda patta kavite baredu bidi. nim baravanige shaili bhavaneyanna pratinidhisate. kanasu kangala tumba nodi kushi aitu.

  ಪ್ರತ್ಯುತ್ತರಅಳಿಸಿ
 7. ಪ್ರಥ್ವಿರಾಜ್...
  ನಿಮ್ಮ ಸ್ನೇಹ ತುಂಬಿದ, ಮೆಚ್ಚುಗೆಯ ನುಡಿಗಳಿಗೆ ಅಭಾರಿ....
  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ