ಸೋಮವಾರ, ಅಕ್ಟೋಬರ್ 1, 2012

ಹಾಗೆ ಸುಮ್ಮನೆ..

1. ತಲೆ ಮೇಲೆ ಕೈ ಹೊತ್ತು ಕೂತಿದ್ದಳು..
"ತಲೆ ಮೇಲಿಂದ ಕೈ ತೆಗೆ, ಅದ್ಯಾರು ಸತ್ರು ಅಂತ ಹೀಗೆ ಕೂತಿದ್ದಿಯ.."
ಕೈ ತೆಗೆದಳು..
ಆದರೂ ಅವಳನ್ನು ಪ್ರಶ್ನೆಯೊಂದು ಕಾಡುತ್ತಿತ್ತು..
ಈಗ ಅವಳ ಬದುಕಲ್ಲಿ ಬದುಕಿರುವುದಾದರೂ ಏನು?!
ಉತ್ತರ ಇನ್ನೂ ಸಿಕ್ಕಿಲ್ಲ...2. ಒಳಗೊಳಗೇ ಬೆಂದು ಬೇಯಿಸುವ ಯಾತನೆಗಳು
ಒದ್ದಾಡುವ ಹೃದಯಕ್ಕೆ ಸಣ್ಣದೊಂದು ಸೂಜಿಯಲ್ಲಿ ಆಳವಾಗಿ ಇರಿದಂತೆ..3. ಮನೆಯ ಬಡತನ ಕರಗಿತ್ತು.. ಮಗ ಒಳ್ಳೆಯ ಸ್ಥಿತಿಗೆ ಬಂದಿದ್ದ.
ಅಪ್ಪ ತನ್ನ ಮಗನೆಂದು ಹೊಗಳಿ ಹೊಗಳಿ ಔದಾರ್ಯ ತೋರಿಸಿದ್ದ.. ಎಲ್ಲರ ಮುಂದೆ ಬೀಗಿದ್ದ.
-ಅದೇ ಹಿಂದೆ
-ಇದೇ ಅಪ್ಪ, ಹೆಂಡದ ದಾಸನಾಗಿದ್ದಾಗ ಅಮ್ಮ ಮಕ್ಕಳ ಓದಿಗೆ ಟೊಂಕ ಕಟ್ಟಿ ನಿಂತಿದ್ದಳು..
ಈಗ ಅಮ್ಮನ ಕಣ್ಣಲ್ಲಿ ಸಾರ್ಥಕತೆಯ ಎರಡು ಹನಿ..ಜೊತೆಗೆ ಮಗನ ಗಟ್ಟಿ ಹೆಗಲು..4. ನನ್ನ ಕನಸದು...
ನನ್ನ ಕೈಯಾರೆ ನೆಟ್ಟ ಕನಸು, ನೀರು ಗೊಬ್ಬರವೆಂದು ಹಾಕಿ ಪ್ರೀತಿಯಿಂದ ಪೋಷಣೆ ಮಾಡಿ ಬೆಳೆಸಿದ ಕನಸು.
ನಾನೂ ಬೆಳೆದಿದ್ದೆ ನನ್ನ ಕನಸೂ ಬೆಳೆದಿತ್ತು...
ಕಾಯಿ, ಹಣ್ಣು, ಹೂಗಳೆಂದು ಚಿಗುರೋಡೆವ ಕಾಲ ಸನ್ನಿಹಿತವಾಗಿತ್ತು..ಖುಷಿಯಾಗಿದ್ದೆ.

ಅಂದು ಅಕಾಲ ಮಳೆ.. ಧೋ ಎಂದು ಗುಡುಗು ಮಿಂಚು ಸಹಿತ ಬಂದಿತ್ತು..
ನಾನು ನನ್ನ ಮನೆಯೊಳಗೆ ಬೆಚ್ಚಗಿದ್ದೆ. ಕನಸು ನನ್ನ ಮನದೊಳಗಿತ್ತು.
ಮನಕ್ಕೆ ಮಹಾ ಸಿಡಿಲು ಬಡಿಯಿತು...
ಎದ್ದು ನೋಡುತ್ತೇನೆ ಕನಸು ಕರಕಲಾಗಿತ್ತು.. :'(4 ಕಾಮೆಂಟ್‌ಗಳು:

 1. ಬರೆದಿರುವ ನಾಲ್ಕು ಸಾಲುಗಳಿಗೆ,ಹೊಸ ದ್ರಶ್ಯವನ್ನು ಕಣ್ಣ ಮುಂದೆ ತರುವ ಸಾಮರ್ಥ್ಯವಿದೆ ಅನ್ಸ್ತು...ಪ್ರತಿಯೊಂದು ಕವನದ ಓದಿದ ಮೇಲೂ ಒಂದಷ್ಟು ಕಥೆ,ಕೆಲವೊಂದು ಸಂದರ್ಭಗಳು ನೆನಪಿಗೆ ಬರುತ್ತವೆ....ಚೆನಾಗಿದೆ..ಬರಿತಾ ಇರಿ..ಓದ್ತಾ ಇರ್ತಿವಿ..

  ಪ್ರತ್ಯುತ್ತರಅಳಿಸಿ
 2. ವಿಭಿನ್ನ ಕಥನಗಳ ಕಟ್ಟಿಕೊಡೋ ಪ್ರತಿ ನ್ಯಾನೋಗಳಲ್ಲೂ ಒಂದು ಅವ್ಯಕ್ತ ವ್ಯಥೆ ಇದೆ.

  ಪ್ರಶ್ನೆಗಳು ಪ್ರಶ್ನೆಗಳೇ ಅವಕ್ಕೆ ಉತ್ತರ ಹುಡುಕುವುದೂ ವ್ಯರ್ಥವೇನೋ?

  ಪ್ರತ್ಯುತ್ತರಅಳಿಸಿ
 3. sushma, tumbaa chennagi bareyuttiri.Bhaashe tumbaa chenda.blog na talebaraha chenda."ammanaaguva samaya", "haage summane","higondu kanasu" tumbaa ishstavaadavu.

  ಪ್ರತ್ಯುತ್ತರಅಳಿಸಿ
 4. ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಚಿನ್ಮಯ್, ಬದರಿ ಸರ್ & ನಂದ ಸರ್...

  ಪ್ರತ್ಯುತ್ತರಅಳಿಸಿ