ಬುಧವಾರ, ಅಕ್ಟೋಬರ್ 17, 2012

ಹಾಗೆ ಸುಮ್ಮನೆ...

1. ನಗು..
ನೋವುಂಡು, ನೋವುಗಳನ್ನೇ ಉಸಿರಾಡುತ್ತಾ ಹೊರಗೆ ನಗುವಿನ ಮುಖವಾಡ ಹೊತ್ತಿರುವವಳನ್ನು ಅದ್ಯಾರೋ ಕೇಳಿದಳಂತೆ "ನಿನ್ನಂತೆ ಸದಾ ಖುಷಿಯಾಗಿರಲು ಏನು ಮಾಡಬೇಕು?!"
ಇವಳ ನಗೆ ಅವಳ ಪ್ರಶ್ನೆಗೆ ಉತ್ತರವೆಂಬಂತೆ ಸುಮ್ಮನೆ ನಕ್ಕು ಬಿಟ್ಟಳು..!


2. ಅವಳು..
ಜಗತ್ತಿನ ಎಲ್ಲಾ ನೋವುಗಳನ್ನು ದೇವರು ಅವಳೊಬ್ಬಳಿಗೆನೆ ಧಾರೆ ಎರೆದು ಬಿಟ್ಟಿದ್ದಾನ...?
ಅದಕ್ಕೆ ಇರಬೇಕು ಅವಳು ದೇವರನ್ನು ಸೇರಲು ತವಕಿಸುತ್ತಿರುವುದು..!
ಎಲ್ಲಾ ಅವನ ಮಡಿಲಿಗೆ ಹಾಕಿ ತಾನು ಖಾಲಿಯಾಗಿರಬೇಕಂತೆ ಅವಳಿಗೆ.


3.
 ಅಮ್ಮ..
ಅಮ್ಮನ ಅಲ್ಪ ನಿರ್ಲಕ್ಷ್ಯವನ್ನೇಕೆ ನಾವು ತಾಳಿಕ್ಕೊಳ್ಳುದಿಲ್ಲ ಅಪ್ಪನ ಬೇಜವಾಬ್ದಾರಿಯಂತೆ??!!


4. ಪ್ರೀತಿ..
ಇಬ್ಬ್ಬರಿಗೂ ಗೊತ್ತಿತ್ತು
ಒಬ್ಬರಿಗೊಬ್ಬರು ದಕ್ಕುವುದಿಲ್ಲವೆಂದು
ಆದರೂ ಅದ್ಯಾವ ಮಾಯೆ ಆವರಿಸಿತ್ತು..?
ಗೊತ್ತಿದ್ದೂ ಮಾಡಿದ ತಪ್ಪಿಗೆ ಶಿಕ್ಷೆ ಇಷ್ಟು ಘೋರವಾಗಿರುತ್ತಾ?
ಅಷ್ಟಕ್ಕೂ ಅದು ತಪ್ಪಾ?
ಇಬ್ಬರೂ ಬೆನ್ನು ಮಾಡಿ ಹೊರಟಿದ್ದಾರೆ...
ಅವಳಿಗೆ ಅವನಿಲ್ಲ..
ಅವನಿಗೆ ಅವಳಿಲ್ಲ..
ಯಾತನೆ ಬಾಳೆಲ್ಲ.. :'(


 

2 ಕಾಮೆಂಟ್‌ಗಳು:

  1. ನಾಲ್ಕೂ ನಮ್ಮ ಸುತ್ತಲಿನ ಪರಧಿಗಳಲ್ಲಿ ಸಂಭವಿಸುವ ಘಾತಗಳನ್ನು ಎತ್ತಿ ತೋರುವ ನ್ಯಾನೋ ಕಥೆಗಳು. ಇಷ್ಟವಾದವು.

    ಪ್ರತ್ಯುತ್ತರಅಳಿಸಿ