ಸೋಮವಾರ, ಡಿಸೆಂಬರ್ 10, 2012

ನಮ್ ಅಡ್ಡ..


ಕಾಲೇಜ್ ಎಂದರೆ ಮೊದಲು ನೆನಪಾಗುವುದೇ ಫ್ರೆಂಡ್ಸ್..ಒಂದಿಷ್ಟು ತರಲೆ, ತುಂಟತನ, ಮಸ್ತಿಗಳು ಈ ಫ್ರೆಂಡ್ಸ್ ಎನ್ನೋ ಪದದ ಜೊತೆಜೊತೆಗೆ ಇರುತ್ತವೆ. ಕಾಲೇಜ್ ಗೆ ಬಂಕ್ ಹೊಡೆದು ನಮ್ ಅಡ್ದಾಕ್ಕೆ ಬಂದು ಸೇರಿದಿವೆಂದರೆ ಅದರ ಗತ್ತು ದೌಲತ್ತೆ ಬೇರೆ..! ಅಂದಹಾಗೆ ನಮ್ ಅಡ್ಡ, ಕಾಲೇಜ್ ಮುಂದುಗಡೆ ಇರೋ ಪಾರ್ಕ್.. ಪಾರ್ಕ್ ಮದ್ಯ ಎಲ್ಲಾ ಗೆಳೆಯರು ಸೇರಿ ಭಾರಿ ಚರ್ಚೆಗಳನ್ನೇ ನಡೆಸುತ್ತೇವೆ. ಸಿನೆಮಾ, ಪ್ರೀತಿ, ಪ್ರೇಮ, ಫ್ರೆಂಡ್ ಶಿಪ್ಪುಗಳ ಬಗ್ಗೆ ಒಂದು ಪಿ.ಹೆಚ್ ಡಿಗಾಗೋವಷ್ಟು ವಿಷಯ ಸಂಗ್ರಹವಿದೆ ನಮ್ಮಲ್ಲಿ. ಹುಡುಗರು ಹುಡುಗೀರು ಎನ್ನದೇ ನಮ್ಮ ನಮ್ಮ ವಾದಗಳನ್ನು ಮಂಡಿಸುತ್ತೇವೆ. ಅಂತ್ಯಾಕ್ಷರಿ, ಮೂಕಾಭಿನಯಗಳು ನಮ್ಮ ವಿವಿಧ ಆಟಗಳಲ್ಲಿ ಮುಖ್ಯವಾದುವು. ಕೆಲವೊಮ್ಮೆ  ಸಂತೋಷ ಉಕ್ಕಿ ಬಂದಾಗ ಎಲ್ಲಾ ಸೇರಿ ಪಾರ್ಕ್ ಎಂದೂ ನೋಡದೆ ನೃತ್ಯ ಕೌಶಲ್ಯನ್ನು ಪ್ರದರ್ಶಿಸುವುದೂ ಇದೆ.. ಅದೆಷ್ಟೋ ಬಾರಿ ನಮ್ಮ ಪ್ರತಿಭೆ(?)ಯನ್ನು ಮೆಚ್ಚದ ಅಜ್ಜಿಯರು, ಆಂಟಿಯರು ಬೈದುಕೊಂಡು ನಾವಿದ್ದ ಜಾಗದಿಂದ ಎಸ್ಕೇಪ್ ಆಗಿರುವುದೂ ಇದೆ.. ನಮ್ ಅಡ್ದಾನೇ  ನಮಗೆ ಪ್ರಿಯವಾದರೂ ಒಂದಿಷ್ಟು ಪಿಕ್ ನಿಕ್, ಟೂರ್ ಗಳ ನೆಪದಲ್ಲಿ ಊರು ಸುತ್ತುತ್ತೇವೆ..ಸಂಭ್ರಮಿಸುತ್ತೇವೆ. ನೆನಪಿನ ಪುಟಗಳಿಗೆ ಸಂತಸದ ಕ್ಷಣಗಳನ್ನು ದಾಖಲಿಸುತ್ತೇವೆ.

ದಾರೀಲಿ ಹೋಗೋ ಹುಡುಗಿರನ್ನು ಕುರಿತು ಕಾಮೆಂಟ್ಸ್ ಮಾಡೋ, ಮೃದು ಭಾವನೆ ತೋರಿಸೋ ನಮ್ ಅಡ್ಡಾದ ಹುಡುಗರಿಗೆ, ಹುಡುಗಿಯರಾಗಿ "ಬೇಡ ಕಣ್ರೋ..ಕಾಮೆಂಟ್ಸ್ ಮಾಡಬೇಡಿ.." ಅನ್ನೋ ನಾವು, ನಮ್ ಸಂಗಡ ಹುಡುಗರಿಲ್ಲದೇ ನಾವು ನಾವೇ ಇದ್ದಾಗ "ಈ ಪೆಕ್ರ ಸ್ವಲ್ಪ ಸ್ಮಾರ್ಟ್ ಇದ್ದಾನೆ.., ಲೋವೆಸ್ಟ್ ಜೀನ್ಸ್ ಒಪ್ಪತ್ತೆ ಇವಂಗೆ.." ಅಂತೆಲ್ಲಾ ಮಾತಾಡಿಕೊಂಡು ಸುಮ್ಮನೊಂದು ಸ್ಮೈಲ್ ಕೊಟ್ಟು ಬಿಡುತ್ತೇವೆ..ಅಲ್ಲಿಗೆ ಅಂವ ನಮ್ಮ ಫ್ಯಾನ್ ಆದಂಗೆ.. ಆದರೂ ಹಿಂದೆ ಬರುವ ಹುಡುಗರನೆಲ್ಲ ನಾವು ಒಪ್ಪುವುದಿಲ್ಲ.."ನಾವು ಕಾಲೇಜ್ ಗೆ ಬಂದಿರೋದು ಓದಲು..ಇವೆಲ್ಲಾ ನಂಗೆ ಹಿಡಿಸೋಲ್ಲ.." ಇತ್ಯಾದಿ ಸಿದ್ಧ ಉತ್ತರ ನಮ್ಮ ಬಳಿ ಇರುತ್ತೆ..ನಮ್ಮಲ್ಲೇ ಒಬ್ಬ ಬೇರೊಂದು ಹುಡುಗಿನ ಇಷ್ಟ ಪಟ್ಟ ಎಂದರೆ ಆ ಹುಡುಗಿನ ಫ್ರೆಂಡ್ ಮಾಡಿಕೊಂಡು ಅವನಿಗೂ "ಫ್ರೆಂಡ್" ಮಾಡೋ ಜವಾಬ್ದಾರಿ ಹುಡುಗಿಯರಾಗಿ ನಮ್ಮ ಮೇಲಿರುತ್ತೆ..ಫೇಸ್ ಬುಕ್ ನಲ್ಲಿ ಕ್ಯೂ ನಲ್ಲಿ ನಿಂತಿರೋ ಹುಡುಗರ ಫ್ರೆಂಡ್ ರಿಕ್ವೆಸ್ಟ್ ಗಳ ಮೇಲೆ ನಮಗೆ ಅದಮ್ಯ ಪ್ರೀತಿ..ಅದನ್ನು ಸ್ವೀಕರಿಸೋ ಅಥವಾ ಡಿಲೀಟ್ ಮಾಡೋ ಗೋಜಿಗೆ ಹೋಗುವುದಿಲ್ಲ..ಜಾಸ್ತಿ ರಿಕ್ವೆಸ್ಟ್ ಇದ್ದಷ್ಟು ನಮ್ಮ ಪ್ರತಿಷ್ಠೆ ಹೆಚ್ಚುವುದು..ದಾರೀಲಿ ಹೋಗೋವಾಗ ರೇಗಿಸೋ ಸೀನಿಯರ್ಸ್ ಹುಡುಗರ ಗುಂಪು, ನಮಗಾಗಿ ಯಾವ ಸಹಾಯಕ್ಕೂ ರೆಡಿಯಾಗಿರೋ ಹೊಸ ಫ್ರೆಂಡುಗಳು, ಫ್ರೆಂಡ್ ಶಿಪ್ ಎಂದು ಬಂದು ಮೊಬೈಲ್ ನಂಬರ್ ಕಲೆಕ್ಟ್ ಮಾಡಿ ಒಂದಿನ "ಐ ಲವ್ ಯು " ಅನ್ನೋ ಹುಡುಗ, ಈಗಲೂ ಅದೇ ಕ್ರಶ್ ಉಳಿಸಿಕೊಂಡಿರೋ ಹೈ ಸ್ಕೂಲ್  ಕ್ಲಾಸ್ ಮೇಟ್, ಫೇಸ್ ಬುಕ್ ನಲ್ಲಿ ಆನ್ಲೈನ್ ಹೋದ ಕೂಡಲೇ ಚಾಟ್ ಬಾಕ್ಸ್ ಲಿ ಬಂದು ಕೂರೋ ಗೆಳೆಯರಲ್ಲದ ಗೆಳೆಯರು.. ಇವರುಗಳ ಬಗ್ಗೆ ತುಸು ಹುಸಿಮುನಿಸು..ಸ್ವಲ್ಪ ಅಕ್ಕರೆ..ಸದ್ದಿಲ್ಲದೇ ನಮ್ಮೊಳಗೊಂದು ಖುಷಿಯನ್ನ ಜಮೆ ಮಾಡುವವರು ಇವರೆಲ್ಲ ಅನ್ನೋ ನಂಬಿಕೆ.

ಕೊನೆಗೆ ಒಂದಿಷ್ಟು ಉಪ್ಪು ಖಾರ ಸೇರಿಸಿ ಮಸಾಲಾ ಮಾಡಿ, ನಮ್ ಅಡ್ಡಾದಲ್ಲಿ ಈ ಬಗ್ಗೆ, ಕಾಲೇಜ್ ರಾಜಕುಮಾರ/ರಿ ಯರ ಬಗ್ಗೆ ಹರಡಿರೋ ಗಾಸಿಪ್ ಗಳ ಮಾತಾಡಿದೆವೆಂದರೆ ಮನಸ್ಸಿಗೆ ಸಮಾದಾನವಾದಂತೆ .ಹೀಗೆ ನಮ್ ಅಡ್ಡ ಸವಿ ಸಿಹಿ ಕ್ಷಣಗಳ ಮಿಶ್ರಣ..ಇಲ್ಲಿ ಸಿಗೋ ಖುಷಿ, ಕಂಫರ್ಟ್ ಕೋಟಿ ತಂದು ಸುರಿದರೂ ಸಿಗಲಾರದು..


=========================================================

ಇವತ್ತಿನ (೧೦-೧೨-೨೦೧೨)ವಿಜಯ ಕರ್ನಾಟಕದ ಲವಲವಿಕೆಯಲ್ಲಿ (ನಮ್ ಅಡ್ಡಾ) ನನ್ನ ಲೇಖನ...
ವಿಜಯ ಕರ್ನಾಟಕದ ಬಳಗಕ್ಕೆ ಮತ್ತು ಶ್ರೀದೇವಿ ಕಳಸದ ಅವರಿಗೆ ಧನ್ಯವಾದಗಳು....
  

10 ಕಾಮೆಂಟ್‌ಗಳು:

 1. ರೀ ನಮ್ ಹುಡ್ಗುರಿಗೆ ಬರ್ಯೋವಾಗಾದ್ರು ಚೂರ್ ಮರ್ಯಾದೆ ಕೊಡ್ರಿ!!!!
  ಅಭಿನಂದನೆಗಳು,.,
  ಮುಂದುವರೆಯಲಿ ಬರಹಯಾನ...ನಮಸ್ತೆ

  ಪ್ರತ್ಯುತ್ತರಅಳಿಸಿ
 2. ಹಹ್ಹಹ್ಹಾ... ಚಿನ್ಮಯ್, ಹುಡುಗ್ರು ಅಂದ್ರೆ ಹಾಗೇನೆ ಅಲ್ವೇನೋ.. ಬಟ್ ನಾನಂತೂ ಹುಡುಗರಿಗೆ ಬೈದಿಲ್ಲಪ್ಪ..!!
  ಧನ್ಯವಾದಗಳು ಕಣೋ ಅಕ್ಕರೆಯ ಪ್ರತಿಕ್ರಿಯೆಗೆ...

  ಪ್ರತ್ಯುತ್ತರಅಳಿಸಿ
 3. ನಮ್ ಅಡ್ಡಾನೂ ಹಿಂಗೇ ಬಿಡ್ರೀ.....

  ಅಡ್ಡಾ ಅಂದ್ಮೇಲೆ ಹಿಂಗೇ.......
  ಅಡ್ಡಡ್ಡಾ ಉದ್ದುದ್ದಾ ಎಲ್ಲಾ ಹೇಳ್ಕೋಂತಾ ಹೋಗ್ತಿರ್ತೀವಿ....

  ಚನ್ನಾಗಿದೆ. ಹೀಗೇ ಬರೀತಾ ಇರಿ.

  ಪ್ರತ್ಯುತ್ತರಅಳಿಸಿ
 4. ಶುಭಾಶಯಗಳು. ಮತ್ತೆ ಕಾಲೇಜು ದಿನಗಳಿಗೆ ಒಮ್ಮೆ ಹೋಗಿ ಬಂದೆ. ಇಲ್ಲಿ ಮೂಡಿದ ಸಾದೃಶ್ಯತೆ ಮುಂದೆಯೂ ಕಾಪಾಡಿಕೊಳ್ಳಿರಿ.

  ಪ್ರತ್ಯುತ್ತರಅಳಿಸಿ
 5. ಕುಣಿದಾಡುವ ವಯಸಿದು..ನಲಿದಾಡುವ ವಯಸಿದು...ನ್ಯಾಯವೇ ದೇವರು ಚಿತ್ರದಲ್ಲಿ ಅಣ್ಣಾವ್ರು ಕುಣಿದ ಹಾಡು...ಸ್ಟೂಡೆಂಟ್ ಲೈಫ್ ಗೋಲ್ಡನ್ ಲೈಫ್ ಅಂತ ಹೇಳ್ತಾರೆ.ಅಂತ ಒಂದು ಸುವರ್ಣ ಅಧ್ಯಾಯ ನಿಮ್ಮ ಲೇಖನದಲ್ಲಿ ಮೂಡಲ ಮನೆಯ ಮುತ್ತಿನ ನೀರಿನಂತೆ ಎರಕವಾಗಿದೆ..ಅಭಿನಂದನೆಗಳು ಪಿ ಎಸ್

  ಪ್ರತ್ಯುತ್ತರಅಳಿಸಿ
 6. ಕನಸು ಕಂಗಳ ಹುಡುಗ ರಾಘವ್ ಸರ್..
  ಹೌದು ಅಡ್ಡಾದ ಮಹಿಮೆ ಅದು.. ಮೋಜು ಮಸ್ತಿಯ ಜೊತೆಗೆ ದೊಡ್ಡದಾದ ಸಂತೋಷ ಬದುಕಿಗೆ ಜಮೆ ಮಾಡುತ್ತೆ.
  ಧನ್ಯವಾದಗಳು..

  ಪ್ರತ್ಯುತ್ತರಅಳಿಸಿ
 7. ಬದರಿ ಸರ್, ಕಾಲೇಜು ದಿನಗಳಿಗೆ ಕರೆದುಕೊಂಡು ಹೋಗಿ ಬಂದ ಧನ್ಯತೆ ನನ್ನದು.. :)
  ಖಂಡಿತಾ ಸರ್.. ಮುಂದೆಯೂ ಈ ಅಡ್ಡಾದ ಒಡನಾಟ, ಖುಷಿಗಳು ಹೀಗೆ ಇರುತ್ತದೆ.. :)
  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ
 8. ನಮ್ಮ ಅಡ್ಡಾಕ್ಕೆ ಬಂದು, ನಮ್ಮನ್ನ ಮೆಚ್ಚಿದ್ದಕ್ಕೆ ಧನ್ಯವಾದಗಳು ದಿನಕರ್ ಸರ್...

  ಪ್ರತ್ಯುತ್ತರಅಳಿಸಿ
 9. ಧನ್ಯವಾದಗಳು ಅಣ್ಣಯ್ಯ...
  ಕಾಲೇಜು ಜೀವನವೇ ಹಾಗೆ ಅಲ್ವಾ? ಸಿಹಿ ಕನಸುಗಳನ್ನು ಕಟ್ಟಿಕೊಡುತ್ತದೆ, ಸವಿ ನೆನಪುಗಳನ್ನು ಭವಿಷ್ಯಕ್ಕೆಂದೇ ಉಳಿಸಿಕೊಡುತ್ತವೆ...

  ಪ್ರತ್ಯುತ್ತರಅಳಿಸಿ