ಭಾನುವಾರ, ಆಗಸ್ಟ್ 4, 2013

HaPpy fRieNd sHiPDay

ನನ್ನ ಕಣ್ಣಲ್ಲಿ ಸಣ್ಣ ನೀರಪೊರೆ ಕಂಡರೂ ತಾನು ಅತ್ತೇ ಬಿಡುವ, ಅಮ್ಮನಂತೆ, ಅಕ್ಕನಂತೆ ಸಲಹುವ ಪ್ರೀತಿಸುವ ಮುದ್ದಿನ ಗೆಳತಿಗೆ 

ಪ್ರೈಮರಿಯಲ್ಲಿ ಜೊತೆಜೊತೆಯಲ್ಲೇ ಕಿತ್ತಾಡಿ, ಒಂದಾಗಿ ಆಡಿದ ಆಟಕ್ಕೆ ಜಗಳಕ್ಕೆ ಇಂಬು ಕೊಟ್ಟ ಮತ್ತು ಈಗ್ಗೂ ಜೊತೆಯಲ್ಲೇ ಇರುವ ಸ್ನೇಹಿತರಿಗೆ 

ಮತ್ತೆ ಹೈ ಸ್ಕೂಲ್ ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಸ್ನೇಹಮಯಿ ಶಿಕ್ಷಕರಿಗೆ, ಒಂದಿಷ್ಟು ತರಲೆ ತುಂಟಾಟ ಮತ್ತು ಮರೆಯದ ನೆನಪನ್ನು ಉಳಿಸಿ ಹೋದ ಹೈ ಸ್ಕೂಲ್ ಗೆಳೆಯರ ಗ್ಯಾಂಗ್ ಗೆ 

ಈಗಲೂ ಮೊದಲಿನಂತೆ ಪ್ರೀತಿಸುವ, ನಾ ಹೋದಾಗ ಒಂದು ಉಂಡೆ ಎತ್ತಿಡುವ ಅಂಗನವಾಡಿ ಟೀಚರ್ ಗಳಿಗೆ

ಮತ್ತೆಂದೂ ನಾ ಯಾರನ್ನೂ ಈ ಪರಿ ಸ್ನೇಹದ ಹೆಸರಲ್ಲಿ ಹಚ್ಚಿಕೊಳ್ಳಬಾರದೆಂದು ಮನಸ್ಸಲ್ಲಿ ತನ್ನ ಹೆಸರ ಹಚ್ಚೆ ಮೂಡಿಸಿ ಘಾಸಿಗೊಳಿಸಿದ ನಾನೇ ಹೇಳಿಕೊಳ್ಳುತ್ತಿದ್ದ ನನ್ನ "ಬೆಸ್ಟ್ ಫ್ರೆಂಡ್ " ಗೆ 

ನಾ ಬೇಜಾರು ಅಂತ ಮೆಸೇಜ್ ಮಾಡಿದರೆ ಪ್ರೀತಿಯಿಂದ ಆ ಭಾವನೆಯನ್ನು ಹೋಗಲಾಡಿಸಿ ಮನಸ್ಸು ನಗುವಂತೆ ಮಾಡುವ ಹೃದಯದ ಹತ್ತಿರ ಬಂದು ನಿಂತ ಗೆಳೆಯನಿಗೆ 

ಆರ್ಕುಟ್ ಲಿ ಸಹೋದರಿ ಎಂದು ಈವರೆಗೂ ನನ್ನ ಜೊತೆಯಲ್ಲೇ ಇರೋ ದೇವತಾ ಮೂರ್ತಿ ಅಣ್ಣನಿಗೆ 

ಕಾಲೇಜ್ ಎಂಬ ಅಂಗಣದಲ್ಲಿ ತಮ್ಮನಂತೆ ಬೆನ್ನಿಗಿರುವ ನನ್ನ "ನಿಧಿ" ಗೆ 

ಮನೆಗೂ ಕಾಲೇಜ್ ಗೂ ದೂರವೆಂದಾಗ ನೀ ಕ್ಲಾಸ್ ಅಟೆಂಡ್ ಮಾಡು ನಾ ಡ್ರಾಪ್ ಮಾಡ್ತೇನೆ ಅಂತ ಹೇಳಿ ಅರ್ಧ ದಾರಿಯವರೆಯೂ ಬಿಟ್ಟು, ನಾ ಬಸ್ ಹತ್ತುವವರೆಗೂ ತಾವು ಕಾದಿದ್ದು ಹೊರಡುವ ಆ ಮೂವರು ಸ್ನೇಹಿತರಿಗೆ 

ಬಯ್ಯುತ್ತಲೇ ನನ್ನ ತಿದ್ದಲು ಪ್ರಯತ್ನಿಸುವ, ನಿನ್ನ ಗೆಲುವು ನನಗೆ ಮುಖ್ಯ ಎಂದು ಪ್ರತಿಬಾರಿಯೂ ಒತ್ತಿಹೇಳುವ, ನನಗಾಗಿ ತುಡಿಯುವ ಸ್ನೇಹಕ್ಕಿಂತ ಮಿಗಿಲಾದ ಸಂಬಂಧಕ್ಕೆ

ಮೌನರಾಗವನ್ನು ಸುಮ್ಮನಾದರೂ ಇಷ್ಟಪಡುವ ಗೆಳತಿಯರಿಗೆ ಮತ್ತು ಗೆಳೆಯರಿಗೆ 

ಸ್ನೇಹದ ಹೆಸರಲ್ಲಿ ಬದುಕಿನೊಳಕ್ಕೆ ಬಂದು "ಮಗಳೇ... " ಎಂಬ ಮಮಕಾರ ತೋರಿಸಿದ ಅಪ್ಪಾಜಿಗೆ

ನಾನು ಏನೇ ಬರೆದರೂ ಚೆನ್ನಾಗಿದೆ ಪುಟ್ಟಿ ಎಂದ ಅಣ್ಣಯ್ಯನಿಗೆ, ನಾ ಮಾಡಿದ ತಪ್ಪುಗಳನ್ನು ತಿದ್ದಿ ಹಾಗಲ್ಲ ಹೀಗೆ ಎಂದು ತಿದ್ದಿ ಕೊಟ್ಟ ಭಯ್ಯಗೆ 

ತನ್ನ ನೋವುಗಳ ನಿನ್ನ ಮುಂದೆ ಮಾತ್ರ ಹರವಿಡಬಲ್ಲೆ ಎಂದ ಮಲ್ಲಿಗೆ ನಗುವಿನ ಗೆಳೆಯನಿಗೆ 

ಚಂದ ಬರೀತಿ.. ಈ ಟಾಪಿಕ್ ಮೇಲೆ ಕೊಡು ಎಂದು ಹೇಳಿ ತಮ್ಮ ಪತ್ರಿಕೆಯಲ್ಲಿ ಒಂದಿಷ್ಟು ಜಾಗ ಕೊಟ್ಟ ಅಕ್ಕನಂತಹ ಗೆಳತಿಗೆ 

ಬ್ಲಾಗ್ ಖಾಲಿ ಇದ್ದಾಗ "ಬ್ಲಾಗ್ ಕಡೆ ಬಾರಮ್ಮ " ಎಂದ ಪ್ರೀತಿಯಿಂದ ಕರೆವ ಮೆಚ್ಚಿನ ಕವಿಗಳಿಗೆ

ಬ್ಲಾಗ್ ನ ಎಲ್ಲಾ ಸ್ನೇಹಿತರಿಗೆ 

ಆತ್ಮೀಯತೆಯ ಒಡಹುಟ್ಟಿದ ಅಕ್ಕಂದಿರಂತೆಯೇ ಪ್ರೀತಿಸುವ ಪಿಜಿಯ ಎಲ್ಲ ಲೇಡಿ ಡಾನ್ ಗಳಿಗೆ

ಕೊಲಿಗ್ಸ್ ಎಂಬ ಮಿತ್ರರಿಗೆ 


ಎಲ್ಲ ಮಕ್ಕಳು ಅಮ್ಮನೆಂದು ಮೊದಲು ಕರೆದರೆ ಇಂವ ಮಾತ್ರ ಸತತ ಪ್ರಯತ್ನದ ಫಲವಾಗಿ ಮೊದಲು ಕಲಿತ ಶಬ್ದ "ಅಕ್ಕ "  ಅಂತಹ ಅಕ್ಕರೆಯ ತಮ್ಮನಿಗೆ 

ನನ್ನ ಮಗುವೇ ಆಗಿರುವ  ಅಕ್ಕನೆಂದರೆ ಒಲುಮೆಯ ಚಿಲುಮೆ ಆಗಿರುವ ಮತ್ತೊಬ್ಬ ತಮ್ಮನಿಗೆ 

ಮಕ್ಕಳನ್ನು ಸ್ನೇಹಿತರಂತೆ ನೋಡುವ ನನ್ನ ದೇವರು ಅಮ್ಮನಿಗೆ 

ಬದುಕಿನಲ್ಲಿ ತಮ್ಮ ತಮ್ಮ ಪಾತ್ರಗಳನ್ನು ನಿಭಾಯಿಸುತ್ತಲೇ ನನ್ನೆಡೆಗೆ ಸ್ನೇಹದ ಹಸ್ತ ಚಾಚಿದ ಎಲ್ಲರಿಗೂ "ಹ್ಯಾಪಿ ಫ್ರೆಂಡ್ ಶಿಪ್ ಡೇ "
14 ಕಾಮೆಂಟ್‌ಗಳು:

 1. ಚಂದದ ಭಾವ ಬರಹ ....ಸ್ನೇಹಿತರ ದಿನದಿ ಬದುಕ ಪಯಣದಲ್ಲಿ ಜೊತೆಯಾದ ಎಲ್ಲಾ ಸ್ನೇಹಿತರನ್ನ ನೆನಪಿಸಿ ಅವರಿಗಾಗಿ ನೀವು ಹೇಳಿರೋ ಶುಭಾಶಯ ತುಂಬಾ ಇಷ್ಟ ಆಯ್ತು ...

  ಮೌನರಾಗದ ಗೆಳತಿಗೆ ಸ್ನೇಹಿತರ ದಿನದ ಶುಭಾಶಯಗಳು ...
  ಸಾವಿರದ ಸ್ನೇಹ ಸಾವಿರಾರು ಸಂಭಂದಗಳ ಹೊತ್ತು ತರಲಿ ...
  ಪ್ರೀತಿಯಿಂದ :)

  ಪ್ರತ್ಯುತ್ತರಅಳಿಸಿ
 2. ಸಂಧ್ಯಾ, ಶ್ರೀ, ಭಾಗ್ಯ ಧನ್ಯವಾದಗಳು ಪ್ರತಿಕ್ರಿಯೆಗೆ ಮತ್ತು ಸ್ನೇಹಿತರ ದಿನದ ಶುಭಾಶಯಗಳು ಕೂಡಾ...

  ಪ್ರತ್ಯುತ್ತರಅಳಿಸಿ
 3. ಹಾಯ್ ಸುಷ್ಮಾ ಜಿ,
  ನಿಮ್ಮ ಮುದ್ದಾದ ಭಾವತುಂಬಿದ ಚೆಂದದ
  ಲೇಖನದ ಜೊತೆ ಜೊತೆಗೆ ನಮ್ಮೇಲ್ಲರಿಗೂ ವಿಶ್ ಮಾಡಿದ್ದಕ್ಕೆ
  ತುಂಭಾ ಧನ್ಯವಾದಗಳು. ನಿಮ್ಮಗೂ ಪ್ರೀತಿಯ ಶುಭಾಶಗಳು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದಗಳು ಕನಸು
   ಖುಷಿಯಾಯಿತು ನಿಮ್ಮ ಪ್ರತಿಕ್ರಿಯೆಯಿಂದ... :)

   ಅಳಿಸಿ
 4. ತಲುಪಿದೆ ತಲುಪಿದೆ ತಲುಪಿದೆ
  ತಲುಪಿದೆ ತಲುಪಿದೆ ತಲುಪಿದೆ
  ತಲುಪಿದೆ ತಲುಪಿದೆ ತಲುಪಿದೆ
  :)

  ಪ್ರತ್ಯುತ್ತರಅಳಿಸಿ
 5. ಸುಷ್.....
  very nice.....
  ಎಲ್ಲರ ಹೃದಯಕ್ಕೂ ತಪುಪಿತು....

  ಚಿರವಾಗಿರಲಿ ಗೆಳೆತನ...

  ಪ್ರತ್ಯುತ್ತರಅಳಿಸಿ
 6. ಸ್ನೇಹಿತೆ ಎನ್ನುವ ಪುಟ್ಟಿಗೆ ಪುಟ್ಟಿ ಎನ್ನುವ ಸಹೋದರಿಗೆ.. ಸಹೋದರಿ ಎನ್ನುವ ಗೆಳತಿಗೆ.. ತುಂಟು ಪುಟಾಣಿಗೆ ಗೆಳೆತನದ ದಿನ ಹರುಷ ವರ್ಷದ ಶುಭಾಶಯಗಳು

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಖುಷಿಯಾಯಿತು ಅಣ್ಣಯ್ಯ ನಿಮ್ಮ ಪ್ರತಿಕ್ರಿಯೆಗೆ...
   ಧನ್ಯವಾದಗಳು...

   ಅಳಿಸಿ