ಶನಿವಾರ, ಏಪ್ರಿಲ್ 11, 2015

ಹವಾಮಾನ ಬದಲಾವಣೆ ಮತ್ತು ಮಹಿಳೆ


ಬೇಸಿಗೆಯಲ್ಲೂ ತಣ್ಣಗಿರಬೇಕಾಗಿದ್ದ ಬೆಂಗಳೂರು ಬೆಂಕಿಯುಗಳುತ್ತಿದೆ..ಬಯಲು ಸೀಮೆ, ಕರಾವಳಿಗಳು ಅಕ್ಷರಷಃ ನಿಗಿನಿಗಿ. ಹವಾಮಾನ ವೈಪರಿತ್ಯಗಳು ಬಿಸಿ ಮುಟ್ಟಿಸುತ್ತಿವೆ. ಆಯಾಕಾಲಕ್ಕೆ ತಕ್ಕಂತೆ ಬದಲಾಗಬೇಕಿದ್ದ ಹವಾಮಾನ, ನಮ್ಮ ಅಂದಾಜಿಗೆ ನಿಲುಕದಷ್ಟು ವೇಗದಲ್ಲಿ ದಾಳಿಯಿಡುತ್ತಿದೆ. ನೈಸರ್ಗಿಕ ಸಂಪನ್ಮೂಲಗಳ ಮೇಲೆ ಮಾನವ ಹೇರಿದ ಒತ್ತಡ, ಮಾಡಿದ ಹಾನಿ ಇದೀಗ ಅವನಿಗೇ ತಿರುಗಿ ಬಿದ್ದಿದೆ. ಹವಾಮಾನ ಬದಲಾವಣೆಯನ್ನುವುದು ಬೆದರಿಕೆಯಾಗಿದೆ.ಘೋರ ಬಿಸಿಲು, ಅಕಾಲೀಕ ಮಳೆ, ಬರಗಾಲ, ಪ್ರವಾಹ.. ಹೀಗೆ ನಾನಾ ರೀತಿಯಲ್ಲಿ ಪ್ರಕೃತಿ ಸೇಡಿಗೆ ನಿಂತಿದೆ. ಮನುಷ್ಯ ದಿಗ್ಭ್ರಾಂತನಾಗಿ ನಿಂತಿದ್ದಾನೆ.ಹೆಚ್ಚುತ್ತಿರುವ ಜನಸಂಖ್ಯೆ, ವಾಹನಗಳು, ಆಹಾರ ಪೂರೈಕೆಯ ಸವಾಲುಗಳು ಮುಂತಾದ ಹತ್ತು ಹಲವು ಸಮಸ್ಯೆಗಳು ಕಾಡು ಕಡಿದು ನಾಡಾಗಿಸಿ ಜಲ-ನೆಲ-ವಾಯು ಎಲ್ಲವನ್ನೂ ಮಲಿನಗೊಳಿಸಿವೆ. ಇಂಗಾಲದ ಡೈ ಆಕ್ಸೈಡ್‌ಅನ್ನು ಹೀರಿಕೊಂಡು ಯಥೇಚ್ಛವಾಗಿ ಆಮ್ಲಜನಕವನ್ನು ಪೂರೈಸುವ ಮರಗಿಡಗಳನ್ನು ನಾಶಗೊಳಿಸಿದ್ದೇವೆ. ಕಾಂಕ್ರೀಟ್ ಕಾಡುಗಳ ನಿರ್ಮಾಣ ಮಾಡಿದ್ದೇವೆ. ಇದರಿಂದ ಮಳೆಯ ಅಸಮತೋಲನವಾಗಿದೆ. ನೈಸರ್ಗಿಕ ಗೊಬ್ಬರಗಳ ಬಳಕೆ ರದ್ದು ಮಾಡಿ, ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಿ ಮಣ್ಣಿನ ಫಲವತ್ತತೆಯನ್ನೂ, ಆಹಾರದ ಗುಣಮಟ್ಟವನ್ನೂ ಇನ್ನಿಲ್ಲದಂತೆ ಹಾಳು ಮಾಡಿದ್ದೇವೆ. ಅತೀಯಾದ ಸಿಎಫ್‌ಸಿ ಯುಕ್ತ ರೇಫ್ರಿಜರೇಟರ್‌ಗಳು, ಎಸಿಗಳು,ಸುಗಂಧದ್ರವ್ಯಗಳ ಬಳಕೆಯಿಂದ ಓಝೋನ್‌ ಪದರದ ಮೇಲೂ ರಂಧ್ರ ಕೊರೆದಿದ್ದೇವೆ. ಉದ್ದುದ್ದ ಪಟ್ಟಿ ಬರೆದುಕೊಂಡು ಹೋಗುವಷ್ಟು ಅವಾಂತರಗಳು ಆಧುನೀಕರಣದ ಭರದಲ್ಲಿ ಆಗಿದೆ..ದಿನೆದಿನೇ ಪ್ರಕೃತಿಯ ಮೇಲೆ ನಿರಂತರ ಶೋಷಣೆಯಾಗುತ್ತಿದೆ. ಪರಿಣಾಮ ಭೂಮಿಯ ಮೇಲ್ಮೈ ಉಷ್ಣಾಂಶ ಮಿತಿಮೀರಿದೆ. ಕಳೆದ ಎರಡು ಶತಮಾನಗಳಲ್ಲಿ 0.3-0.6 0 ಸೆಂ. ನಷ್ಟು ಈ ಪ್ರಮಾಣ ಹೆಚ್ಚಿದೆ. ಸಮುದ್ರ ಮಟ್ಟ ಏರಿಕೆಯಾಗುತ್ತಿದೆ. ಇದು ನಾವು ತತ್‌ತಕ್ಷಣ ಯೋಚಿಸಲೇಬೇಕಾದ ಗಂಭೀರ ವಿಷಯ ಇದು.

ದಿನಾಂಕ 07-04-2015 ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(KSPCB)ಯವರು "ಹವಾಮಾನ ಬದಲಾವಣೆ ಮತ್ತು ಮಹಿಳೆ" ಎಂಬ ವಿಷಯವಾಗಿ ಮಹಿಳಾ ಭಾಗಿದಾರರ ಸಭೆಯನ್ನು ಏರ್ಪಡಿಸಿದ್ದರು. KSPCB ವತಿಯಿಂದ ನಡೆಸಲ್ಪಟ್ಟ ಶ್ಲಾಘನೀಯ ಸಭೆಯಿದು. ಮಹಿಳಾ ದೃಷ್ಠಿಕೋನಗಳ ಬಗ್ಗೆ, ಪರಿಹಾರೋಪಗಳ ಬಗ್ಗೆ , ನಮ್ಮ ನಮ್ಮ ಚೌಕಟ್ಟುಗಳ ಒಳಗೆ ನಾವೇನು ಮಾಡಬಹುದು ಎಂಬುದರ ಕುರಿತಾಗಿ ಮಹಳಷ್ಟು ಸಂಪನ್ಮೂಲ ವ್ಯಕ್ತಿಗಳು ಬಂದು ತಂತಮ್ಮ ಅಭಿಪ್ರಾಯ ಮಂಡಿಸಿದರು. ನಾನೂ ಆ ಸಭೆಯಲ್ಲಿ ಭಾಗವಹಿಸಿದ್ದು ನನ್ನ ಹಮ್ಮೆ.ಅಲ್ಲಿ ಹೇಳಲಾದ ಕೆಲವು ವಿಷಯಗಳನ್ನು ಇಲ್ಲಿ ದಾಖಲಿಸಲು ಇಚ್ಛಿಸುತ್ತೇನೆ:

ಸಂತಸದ ಸಂಗತಿಯೆಂದರೆ ಅಲ್ಲಿ ಮಾತಾನಾಡಿದವರ್ಯಾರೂ ಮೋಡಗಳನ್ನು ಡಿಕ್ಕಿ ಹೊಡೆಸಿ ಮಳೆ ತರಿಸುವ ಬಗ್ಗೆ ಮಾತಾನಾಡಲಿಲ್ಲ. ನಮ್ಮ ದಿನನಿತ್ಯದ ಜೀವನದಲ್ಲಿ ಚಿಕ್ಕಚಿಕ್ಕ ಮಾರ್ಪಾಡು ಮಾಡಿಕೊಳ್ಳುವುದರ ಮೂಲಕ ಹೇಗೆ ಪ್ರಕೃತಿಯನ್ನು ಸಂರಕ್ಷಿಸಬಹುದು ಎಂಬುದರ ಕುರಿತಾಗಿ ಮಾತಾನಾಡಿದರು. ಆ ಮೂಲಕ ಮಹಿಳೆಯ ಸೂಕ್ಷ್ಮತೆಯನ್ನು ಹರವಿಟ್ಟರು.

 • ದಿನನಿತ್ಯದ ಬಳಕೆಗೆ ನಾವು ಬಳಸುವಂತಹ ಡಿಟರ್ಜೆಂಟ್ (ಮಾರ್ಜಕ) ಗಳಲ್ಲಿ ಹೆಚ್ಚು ಪ್ರಮಾಣದ ರಂಜಕದ (Phosphorus) ಪ್ರಮಾಣವಿರುವುದು, ಜಲಮಾಲಿನ್ಯಕ್ಕೆ ಕಾರಣವಾಗುತ್ತದೆ. ಆದಷ್ಟು ರಂಜಕ ರಹಿತ ಮಾರ್ಜಕದ ಬಳಕೆ ಮಾಡುವುದು.
 • ಮಳೆನೀರು ಇಂಗಿಸುವಿಕೆ (rain water harvesting) ಗೆ ಹೆಚ್ಚಿನ ಪ್ರಮಾಣದ ಒತ್ತು ನೀಡಿ ಅಂತರ್ಜಲ ಮಟ್ಟ ಹೆಚ್ಚಿಸುವುದು. ಈ ಬಗ್ಗೆ ಕಾನೂನು ಮೂಲಕ ನಿಯಮಗಳನ್ನು ತಂದು ಕಡ್ಡಾಯವಾಗಿಸುವುದು.ಪ್ರತಿಮನೆಯಲ್ಲೂ ಇಂಗುಗುಂಡಿಗಳಿರುವಂತೆ ಮಾಡುವುದು.
 • ಕೆರೆಗಳನ್ನು ಪುನರ್‍ಜೀವನಗೊಳಿಸುವುದು.
 • ನೀರಿನ ಪುನರ್‌ಬಳಕೆ.
 • ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಸೌದೆ ಒಲೆಗಳಲ್ಲೇ ಆಹಾರ ತಾಯಾರಿಸುತ್ತಿದ್ದು, ಇದು ಕಾಡಿನ ನಾಶಕ್ಕೆ ಮತ್ತು ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಹಾಗಾಗಿ ಅವುಗಳ ಪ್ರಮಾಣ ತಗ್ಗಿಸಲು ಕ್ರಮಕೈಗೊಳ್ಳುವುದು
 • ಹೆಚ್ಚಿನ ಪ್ರಮಾಣದಲ್ಲಿ ಸೌರಶಕ್ತಿಯ ಬಳಕೆಗೆ ದೃಢಮನಸ್ಸು ಮಾಡುವುದು. ಸೌರಶಕ್ತಿಯ ಉಪಕರಣಗಳಿಗೆ ಸದ್ಯ ಬಹಳಷ್ಟು ಬೆಲೆಯಿದ್ದು, ಜನಸಾಮಾನ್ಯರಿಗೆ ದುಬಾರಿಯಾಗುವುದರಿಂದ ಸರಕಾರ ಇದರ ಕಡೆ ಒತ್ತು ನೀಡಬೇಕಾಗಿದೆ.
 • ಮಣ್ಣಿನ ಜೈವಿಕ ವೈವಿಧ್ಯತೆ ಕಾಪಾಡಿಕೊಳ್ಳಲು ಆಹಾರದಲ್ಲಿ ವಿವಿಧತೆಯನ್ನು ತರಬೇಕು. ವಿವಿಧ ಬೆಳೆಗಳನ್ನು ಬೆಳೆಯಬೇಕು.
 • ್ರಾಮೀಣ ಪ್ರದೇಶದ ಮಹಿಳೆಯರಿಗೆ ಹವಾಮಾಣ ವೈಪರಿತ್ಯಗಳ ಬಗ್ಗೆ ತಿಳುವಳಿಕೆ ನೀಡಬೇಕು.ಮಹಿಳಾ ಗುಂಪುಗಳೇ ಸೇರಿಕೊಂಡು ಸೋಲಾರ್‍ ಸಾಧನಗಳನ್ನು ಅಶಕ್ತರಿಗೆ ಕೊಡುಗೆಯಾಗಿ ನೀಡಬೇಕು. ಆರ್ಥಿಕವಾಗಿ ಸ್ವತಂತ್ರರಾಗಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳುವುಷ್ಟು ಸಾಮರ್ಥ್ಯ ಹೊಂದಬೇಕು.ಹಾಗಾದಾಗ ಸದಾ ಪ್ರಕೃತಿಯ ಜೊತೆಯೇ ಬೆರೆಯುವ ಅವಕಾಶವಿರುವ ಮಹಿಳೆ ಪ್ರಕೃತಿಯ ಉಳಿವಿಗಾಗಿ ತನ್ನ ಕೊಡುಗೆ ಸಲ್ಲಿಸಬಹುದು.
 • ಆಧುನಿಕ ಜಗತ್ತಿಗೆ ಮಹಿಳೆ ತೆರೆದುಕೊಳ್ಳಲು ಪ್ರೋತ್ಸಾಹ, ಈ ಕಾಮರ್ಸ್‌ನಂತಹ ಹೊಸ ಮಾಧ್ಯಮ ಮತ್ತು ಅವಕಾಶಗಳ ಪರಿಚಯ ಮಾಡಿಕೊಡುವುದು.
 • ತ್ಯಾಜ್ಯ ನಿರ್ವಹಣೆ. ತಿಪ್ಪೆಗುಂಡಿಯಂತಹ ಪುರಾತನ ಕ್ರಮವನ್ನು ಮತ್ತೆ ಅನುಷ್ಠಾನಕ್ಕೆ ತರುವುದು. ಮತ್ತೆ ಅದರಲ್ಲಿ ಪ್ಲಾಸ್ಟಿಕ್‌ ಬೆರೆಕೆಯಾಗದಂತೆ ನೋಡಿಕೊಳ್ಳುವುದು.
 • ಕಸ ನಿರ್ವಹಣೆ ನಮ್ಮೆಲ್ಲರ ಹೊಣೆ ಎಂಬುದನ್ನು ಅರಿತುಕೊಳ್ಳುವುದು.
 • ತ್ಯಾಜ್ಯಗಳ ವಿಂಗಡನೆ ಮತ್ತು ಸೂಕ್ತ ವಿಲೇವಾರಿ.
 • ಪ್ಲಾಸ್ಟಿಕ್‌ ನಿಷೇಧ.
 • ಎಲ್ಲೆಂದರಲ್ಲಿ ಕಸ ಎಸೆಯುವುವವರ ಕುರಿತು ಕಠಿ ಮತ್ತು ತಕ್ಷಣದ ಕ್ರಮ ತೆಗೆದುಕೊಳ್ಳುವುದು.
 • ಅಪಾರ್ಟ್‌‌ಮೆಂಟ್‌ಗಳ ತ್ಯಾಜ್ಯವನ್ನು ಆ ಅಪಾರ್ಟ್‌ಮೆಂಟ್ ವಾಸಿಗಳೇ ವಿಲೇವಾರಿ ಮಾಡುವುದು ಅಥವಾ ಸಂಸ್ಕರಿಸುವುದು
 • ಸಂಪ್ರದಾಯಿಕ ಕೃಷಿಗೆ ಹೆಚ್ಚಿನ ಒತ್ತು ನೀಡುವುದು. ಈ ಮೂಲಕ ಮುಂದಿನ ದಿನಗಳಲ್ಲಿ ತಲೆದೋರಬಹುದಾದ ಭಾರಿ ಆಹಾರ ಅಸಮತೋಲನವನ್ನು ತಡೆಯುವುದು.
 • ್ತ್ರೀಶಕ್ತಿ ಗುಂಪುಗಳ ಮೂಲಕ ಗ್ರಾಮೀಣ ಅಭಿವೃಧ್ದಿಗೆ ಕಂಕಣ ತೋಡುವುದು.
 • ಮಹಿಳೆಯರಿಗೆ ಪರಿಸರ ಸ್ನೇಹಿಯಾದ ಕರಕುಶಲ ವಸ್ತುಗಳ ತಾಯಾರಿಕೆಗೆ ಪ್ರೋತ್ಸಾಹ ನೀಡುವುದು.
 • ಸ್ತ್ರೀಶಕ್ತಿಯ ಮಹಿಳೆಯರಿಗೆ ಅವರ ಕೆಲಸಗಳಿಗೆ ಅನುಗುಣವಾಗಿ ಆರ್ಥಿಕ ಬೆಂಬಲ ನೀಡುವುದು.
 • ಅಲ್ಯುಮಿನಿಯಂನಂತಹ ಲೋಹದ ವಸ್ತುಗಳ ಪುನರ್‌ಬಳಕೆ, ಆ ಮೂಲಕ ಇಂಧನ ಉಳಿತಾಯ.
 • ಸಭೆ-ಸಮಾರಂಭಗಳಲ್ಲಿ ಪೇಪರ್‍ ಅಥವಾ ಪ್ಲಾಸ್ಟಿಕ್‌ ತಟ್ಟೆ,ಲೋಟಗಳ ಬದಲಿಗೆ ಸ್ಟೀಲ್ ತಟ್ಟೆ-ಲೋಟಗಳನ್ನೇ ಬಳಸುವುದು
 • ಸಭೆ-ಸಮಾರಂಭಗಳಲ್ಲಿ ಸ್ಟೀಲ್‌ ತಟ್ಟೆ, ಲೋಟ ಮುಂತಾದವುಗಳನ್ನು ಒರೆಸಲು ಬಟ್ಟೆಯನ್ನು ಉಪಯೋಗಿಸುವುದು.
 • ೆಟ್ರೋಲಿಯಂ ಉತ್ಪನ್ನಗಳ ಬಳಕೆ ತಗ್ಗಿಸುವುದು.
 • ಗೋಬರ್‍ ಗ್ಯಾಸ್ ಮತ್ತು ಸೌರಶಕ್ತಿಗಳ ಬಳಕೆ ಹೆಚ್ಚಿಸುವುದು
 • ಅಲ್ಲಲ್ಲಿ ಕಸದ ಬುಟ್ಟಿಗಳನ್ನು ಇಡುವುದು ಅದರಲ್ಲಿಯೇ ಕಸವನ್ನು ಹಾಕಬೇಕಾಗಿ ಕಡ್ಡಾಯ ಮಾಡುವುದು.

ೀಗೆ ಹತ್ತು ಹಲವು ವಿಷಯಗಳ ಕುರಿತು ಬೆಳಕು ಚೆಲ್ಲಲಾಯಿತು. ಮಹಿಳೆಗೆ ಪ್ರಕೃತಿಯ ಜೊತೆ ಎಂದಿಗೂ ಸೂಕ್ಷ್ಮ ಒಡನಾಟ ಇದ್ದೇ ಇದೆ. ತಡವಾಗಿ ಮಾರ್ಕೆಟಿಗೆ ಬಂದ ಅವರೆಕಾಯಿಯಲ್ಲೂ, ಅದರ ಗುಣಮಟ್ಟದಲ್ಲೂ ಮಹಿಳೆ ಹವಾಮಾನದ ವೈಪರಿತ್ಯ ಮತ್ತು ಪರಿಣಾಮಗಳ ಬಗ್ಗೆ ಆಕೆ ಅರಿಯಬಲ್ಲಳು. ಹಾಗಾಗಿ ಅವಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು. ಹವಾಮಾನದ ಬದಲಾವಣೆ ಸ್ತ್ರೀಯ ಆರೋಗ್ಯದ ಮೇಲೂ ಪರಿಣಾಮ ಬೀರಬಲ್ಲುದು ಹಾಗಾಗಿ ಅಪಾಯ ಕಟ್ಟಿಟ್ಟಬುತ್ತಿ ಎಂದು ಮನವರಿಕೆ ಮಾಡಿಕೊಡಬೇಕು ಆಗ ಆಕೆ ಈ ಕುರಿತು ಗಂಭೀರವಾಗಬಲ್ಲಳು.ೊನೆಯದಾಗಿ ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆ. ನಮ್ಮ ಮಿತಿಗಳಲ್ಲಿ ಆಗಬಹುದಾದ ಚಿಕ್ಕ ಪುಟ್ಟ ಬದಲಾವಣೆಗಳ ಮೂಲಕ ಹವಾಮಾನದ ವೈಪರೀತ್ಯವನ್ನು ತಡೆಯೋಣ. ಪ್ರಾಕೃತಿಕ ಸಂಪನ್ಮೂಲಗಳನ್ನು ನಾವು ತಾಯಾರಿಸಲಾಗುವುದಿಲ್ಲ... ಪ್ರಕೃತಿ ಕೊಟ್ಟಷ್ಟೇ ನಮ್ಮದು.. ಕೊಟ್ಟಷ್ಟನ್ನು ಪಡೆದು ಜಾಗಾರೂಕತೆಯಿಂದ ಬಳಸೋಣ. ಪ್ರಕೃತಿಯನ್ನು ಉಳಿಸೋಣ.